ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಆಗಿ ಟಾಲಿವುಡ್ ಗೆ ಹಾರಿ ಅಲ್ಲಿಯೂ ಮಿಂಚಿ, ನಂತರ ಟಾಲಿವುಡ್ ಈಗ ಬಾಲಿವುಡ್ ನಲ್ಲಿ ಮಿನುಗುತ್ತಿರುವ ಕಿರಿಕ್ ಬೆಡಗಿ ರಶ್ಮಿಕಾ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ.. ಸಣ್ಣ ಪುಟ್ಟ ವಿಚಾರಗಳನ್ನ ಅಭಿಮಾನಿಗಳ ಬಳಿ ಹೇಳಿಕೊಳ್ತಾ ಇರುತ್ತಾರೆ.. ಅಂತೆಯೇ ಟ್ರೊಲ್ ಆಗೋ ನಟಿಯರಲ್ಲೂ ರಶ್ಮಿಕಾನೇ ನಂಬರ್ 1..
ರಶ್ಮಿಕಾ ಪಸ್ತುತ , ಬಾಲಿವುಡ್ , ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀಗಿದ್ರೂ ಕೂಡ ಅವರು ಈಗ ಸಿನಿಮಾ ಕೆಲಸದಿಂದ ಬ್ರೇಕ್ ಪಡಿದು ವಿದೇಶಕ್ಕೆ ಹಾರುತ್ತಿದ್ದಾರೆ..
ತಾನು ವಿದೇಶಕ್ಕೆ ತೆರಳುತ್ತಿರುವುದಕ್ಕೆ ಸಂಬಂಧಿಸಿದಂತೆ ಪಾಸ್ಪೋರ್ಟ್ ಇರುವ ಫೋಟೊವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿ , “ನಾನು ಎಲ್ಲಿಗೆ ಹೋಗುತ್ತಿದ್ದೇನೆ ಗೆಸ್ ಮಾಡಿ” ಎಂದು ಅಭಿಮಾನಿಗಳನ್ನು ಪ್ರಶ್ನಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಅಲ್ಲದೇ “ಈ ಬಾರಿ ನಿಮ್ಮಿಂದ ದೂರ ಹೋಗುತ್ತಿದ್ದೇನೆ. ಆದರೆ ಬೇಗನೇ ವಾಪಸ್ಸಾಗುತ್ತೇನೆ” ಎಂದು ತಾವು ವಿದೇಶಕ್ಕೆ ಹೋಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಆದ್ರೆ ಸ್ಪಷ್ಟವಾಗಿ ಯಾವ ದೇಶ ಅಂತ ಹೇಳಿಲ್ಲ..
ಆದ್ರೆ ಮೂಲಗಳ ಪ್ರಕಾರ ರಶ್ಮಿಕಾ ಅಮೆರಿಕಾಗೆ ತೆರಳುತ್ತಿದ್ಧಾರೆ ಎಂದು ವರದಿಯಾಗಿದೆ.. ಅಂದ್ಹಾಗೆ ಅಮೆರಿಕಾದಲ್ಲಿ ರಶ್ಮಿಕಾ ರೂಮರ್ಡ್ ಬಾಯ್ ಫ್ರೆಂಡ್ ನಟ ವಿಜಯ್ ದೇವರಕೊಂಡ ಅವರು ಲೈಗರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ.. ಹಾಗಾಗೀ ಅವರನ್ನೇ ಭೇಟಿಯಾಗಲು ರಶ್ಮಿಕಾ ಹೋಗ್ತಿರೋದಾಗಿ ತಿಳಿದುಬಂದಿದೆ..
ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಇಬ್ಬರೂ ಗೀತಾ ಗೋವಿಂದಮ್, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದು, ನಂತರ ಆತ್ಮೀಯ ಸ್ನೇಹಿತರಾಗಿದ್ದಾರೆ. ಅವರ ಸಂಬಂಧದ ವಿಚಾರವಾಗಿ ಸಾಕಷ್ಟು ಊಹಾಪೋಹಗಳಿವೆ.. ಅವರಿಬ್ರೂ ಕೂಡ ಪ್ರೇಮಿಗಳು ಎಂದೇ ವದಂತಿಗಳು ಹಬ್ಬಿವೆ.. ಸಾಲದಕ್ಕೆ ಆಗಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ತಿರುತ್ತದೆ.. ಆದ್ರೆ ಇಬ್ಬರೂ ಕೂಡ ವದಂತಿಗಳಿಗೆ ಕೊಡೋದು ಒಂದೇ ಉತ್ತರ.. “ನಾವಿಬ್ರು ಸ್ನೇಹಿತರಷ್ಟೇ” ಆದ್ರೆ ಇದನ್ನ ಒಪ್ಪಲು ಅಭಿಮಾನಿಗಳು ತಯಾರಿಲ್ಲ.. ಅಂದ್ಹಾಗೆ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಅವರೊಂದಿಗೆ ನಟಿಸಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಡಿ.17ರಂದು ರಿಲೀಸ್ ಆಗಲಿದೆ. ಮತ್ತೊಂದ್ ಕಡೆ ಹಿಂದಿಯ ಮಿಷನ್ ಮಜ್ನು ಹಾಗೂ ಗುಡ್ ಬೈ ಸಿನಿಮಾ ಕೆಲಸಗಳು ಕೂಡ ಬಹುತೇಕ ಪೂರ್ಣಗೊಂಡಿವೆ.