Rajanikanth : ಡಿಸೆಂಬರ್ 12 ಕ್ಕೆ ‘ಬಾಬಾ’ ಫ್ಯಾನ್ಸ್ ಗೆ ಹಬ್ಬ..!!
ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಖುಷಿ ನೀಡುವ ತಯಾರಿ ನಡೆಸಿಕೊಳ್ತಿದ್ದಾರೆ..
ರಜನಿಕಾಂತ್ ನಟನೆಯ ಸೂಪರ್ ಹಿಟ್ ಸಿನಿಮಾವಾಗಿದ್ದ ಬಾಬಾ ಇದೀಗ ಅಪ್ ಗ್ರೇಡ್ ಆಗಿ ಮತ್ತೊಮ್ಮೆ ರೀ ರಿಲೀಸ್ ಆಗುತ್ತಿದೆ.. ಹೀಗಾಗಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.. ಅಂದ್ಹಾಗೆ ಇದೀಗ ಬಾಬಾ ಅಪ್ ಗ್ರೇಡ್ ವರ್ಷನ್ ಟ್ರೇಲರ್ ಕೂಡ ರಿಲೀಸ್ ಆಗಿ ಮತ್ತೆ “ ಬಾಬಾ’ ಸದ್ದು ಜೋರಾಗಿದೆ..
ರಜನೀಕಾಂತ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಅಂದ್ರೆ ಡಿಸೆಂಬರ್ 12 ಕ್ಕೆ ಸಿನಿಮಾ ತೆರೆಗೆ ಬರಲಿದೆ..
ಸದ್ಯ ಸಿನಿಮಾ ಟ್ರೈಲರ್ ಹಂಚಿಕೊಂಡು, ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ `ಬಾಬಾ’ ಎಂದು ಟ್ವೀಟ್ಟರ್ನಲ್ಲಿ ನಟ ಬರೆದುಕೊಂಡಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಬಾಬಾ ಸಿನಿಮಾಗೆ ನಿರೀಕ್ಷೆ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ ಎಂದೇ ಹೇಳಲಾಗಿತ್ತು..
ಇದೀಗ ದೈವಾರಾಧನೆ ಕುರಿತಾದ ಸಿನಿಮಾ ಕಾಂತಾರ ಸೂಪರ್ ಸಕ್ಸಸ್ ಕಂಡ ನಂತರ ರಜನಿಕಾಂತ್ ಅವರು ಬಾಬಾ ಸಿನಿಮಾ ಮರು ರಿಲೀಸ್ ಗೆ ತಯಾರಾಗಿದ್ದಾರೆ ಎನ್ನಲಾಗುತ್ತಿದೆ..
ಅಂದ್ಹಾಗೆ ಬಾಬಾ ಸಿನಿಮಾ ದೈವ ಶಕ್ತಿಯನ್ನೊಳಗೊಂಡ ಕಥೆಯಾಧಾರಿತ ಸಿನಿಮಾವಾಗಿದೆ..