Most Searched Indian Films 2022 : KGF 2 , ಕಾಂತಾರಗೆ ಎಷ್ಟನೇ ಸ್ಥಾನ..??
ವಿಶ್ವಾದ್ಯಂತ 2022 ರಲ್ಲಿ ಸಾಲು ಸಾಲು ಸಿನಿಮಾಗಳು ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಿ ಅನೇಕ ಸಿನಿಮಾಗಳು ಫ್ಲಾಪ್ ಆದ್ವು ಅನೇಕ ಸಿನಿಮಾಗಳು ಹಿಟ್ ಆದ್ವಿ.. ಇನ್ನೂ ಕೆಲ ಸಿನಿಮಾಗಳು ದೇಶ ವಿದೇಶದಲ್ಲಿ ಸೆನ್ಷೇಷನ್ ಸೃಷ್ಟಿ ಮಾಡಿವೆ..
ಲಾಲ್ ಸಿಂಗ್ ಚಡ್ಡಾದಂತಹ ಸಿನಿಮಾ ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿದ್ರೆ , ನಿರೀಕ್ಷೆನೇ ಮಾಡದಷ್ಟು ಸದ್ದು ಮಾಡಿ ಬಾಕ್ಸ್ ಆಫೀಸ್ ,ಲೂಟಿ ಮಾಡಿದ್ದು ಕಾಂತಾರ..
ಇನ್ನೇನು 2022 ಮುಗಿದು 2023 ಬರಲಿದೆ.. ಇದರ ಬೆನ್ನಲ್ಲೇ ಅಂದ್ಹಾಗೆ 2022ರಲ್ಲಿ ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಟಾಪ್ 10 ಭಾರತದ ಚಿತ್ರಗಳ ಪಟ್ಟಿ ಬಂದಿದೆ..
ಅಂದ್ಹಾಗೆ ಮೊದಲ ಸ್ಥಾನದಲ್ಲಿ ಅಚ್ಚರಿ ಎನಿಸುವಂತೆ ಬಾಲಿವುಡ್ ಗೆ ಮರು ಜೀವ ಕೊಟ್ಟ ಬ್ರಹ್ಮಾಸ್ತ್ರ ಸಿನಿಮಾವಿದೆ..
2 ನೇ ಸ್ಥಾನದಲ್ಲಿ ಪ್ರಶಾಂತ್ ನಿರ್ದೇಶಿಸಿ ರಾಕಿಂಗ್ ಸ್ಟಾರ್ ಯಶ್ ನಟಿಸಿ ವಿಶ್ವಾದ್ಯಂತ ಕ್ರೇಜ್ ಹುಟ್ಟು ಹಾಕಿದ್ದ KGF 2 ಸಿನಿಮಾ ಇದೆ..
ನಂತರ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದ The Kashmir Files , RRR , ಕಾಂತಾರ , ಪುಷ್ಪ , ವಿಕ್ರಮ್ , ಲಾಲ್ ಸಿಂಗ್ ಚಡ್ಡಾ , ದೃಶ್ಯಂ 2 ಇದೆ..
ಈ ಪಟ್ಟಿಯಲ್ಲಿ ಹೆಚ್ಚು ಇರುವುದು ಸೌತ್ ಸಿನಿಮಾಗಳೇ ಅನ್ನೋದು ಒಂದೆಡೆಯಾದ್ರೆ ಟಾಪ್ 5 ರಲ್ಲಿ 2 ಕನ್ನಡ ಸಿನಿಮಾಗಳು ಇರುವುದು ನಮ್ಮ ಹೆಮ್ಮೆ..