Rashmika : ‘ಕನ್ನಡದ ಮೇಲೆ ಪ್ರೀತಿ ಇದೆ, ಕಾಂತಾರ ನೋಡಿ ಮೆಸೇಜ್ ಮಾಡಿದ್ದೆ’..!!
ಕರ್ನಾಟಕದವರೇ ಆದ್ರೂ ಕನ್ನಡದ ಮೇಲಿನ ಅವರ ತಾತ್ಸಾರವೇ ಅವರನ್ನ ಜನ ಇಷ್ಟು ಟ್ರೋಲ್ ಮಾಡೋದಕ್ಕೆ ಮುಖ್ಯ ಕಾರಣ..
ಯಾರಾದ್ರೂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ, ಸ್ವಭಾಷಿಕರಿಂದಲೇ ಟೀಕೆಗೆ ಗುರಿಯಾಗ್ತಾರಂದ್ರೆ ಅದು ರಶ್ಮಿಕಾ ಮಂದಣ್ಣ ಅಂತ ಹಿಂದೂ ಮುಂದೂ ಯೋಚನೆ ಮಾಡ್ದೇ ಹೇಳಬಹುದು… ಅದು ಚಷ್ಮಾ ಸುಂದರಿ ರಶ್ಮಿಕಾ ಅಂತ.!!
ಟ್ರೋಲ್ ಗಳಿಗಷ್ಟೇ ಸೀಮಿತವಾಗ್ದೇ ಇದೀಗ ರಶ್ಮಿಕಾಟ ಬ್ಯಾನ್ ಆಗ್ಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ…
ರಶ್ಮಿಕಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ..
ವಿವಾದಗಳಲ್ಲಿ ಸಿಲುಕಿ ಒದ್ದಾಡ್ತಿರುವ ರಶ್ಮಿಕಾ ಮಂದಣ್ಣಗೆ ಇದು ಒಂದ್ ರೀತಿ ತಾನೇ ತಂದುಕೊಂಡ ಭಾಗ್ಯ ಅಂದ್ರೆ ತಪ್ಪಾಗಲ್ಲ..
ಕಿರಿಕ್ ಪಾರ್ಟಿ…!! 2016 ರಲ್ಲಿ ಹೊಸ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದ ಸಿನಿಮಾ.. ಈ ಸಿನಿಮಾದಲ್ಲಿ ಕನ್ನಡಕ ಹಾಕಿಕೊಂಡಿದ್ದ ಸಾನ್ವಿ ನ್ಯಾಷನಲ್ ಕ್ರಶ್ ಆಗಿಬಿಟ್ಟರು.. ಇಲ್ಲಿಂದಲೇ ರಶ್ಮಿಕಾಗೇ ಸುವರ್ಣ ಯುವ ಶುರುವಾಗಿದ್ದು..
ಇಂದು ತೆಲುಗು , ತಮಿಳು , ಬಾಲಿವುಡ್ ನಲ್ಲೂ ಸೆಟಲ್ ಆಗೋಕೆ ಟ್ರೈ ಮಾಡ್ತಿದ್ದಾರೆ.. ಯಶಸ್ಸಿನ ಉತ್ತುಂಗದಲ್ಲಿದ್ದಾರೆ ಅಂದ್ರೆ ಅದಕ್ಕೆ ಕಾರಣ ನಮ್ಮ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ… ಸಿನಿಮಾದ ನಾಯಕರಾಗಿದ್ದವರು ರಕ್ಷಿತ್ ಶೆಟ್ಟಿ.. ನಿರ್ದೇಶಕರು ರಿಷಭ್ ಶೆಟ್ಟಿ..
ಆದ್ರೆ ತಮ್ಮನ್ನ ಈ ಮಟ್ಟಕ್ಕೆ ಬೆಳಕಿ ಜನರಿಗೆ ರಶ್ಮಿಕಾ ಅನ್ನೋ ಪ್ರತಿಭೆಯನ್ನ ಪರಿಚಯಿಸಿದ ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನೂ ಹೇಳದೇ ರಶ್ಮಿಕಾ ವ್ಯಂಗ್ಯಾತ್ಮಕವಾಗಿ ಕೈ ಸನ್ನೆ ತೋರಿಸಿದ್ದರು.. ಇದೇ… ಇದೇ ಅಸಲಿಗೆ ಕ ನ್ನಡಿಗರನ್ನ ಕೆರಳಿಸಿರುವುದು…
ಇದಕ್ಕೆಲ್ಲಾ ಉತ್ತರಿಸಿರುವ ರಶ್ಮಿಕಾ ಇದೆಲ್ಲಾ ಸುಳ್ಳು ಸುದ್ದಿ , ವಾಸ್ತವ ಇಲ್ಲ.. ಯಾರೋ ಬೇಕಂತ್ಲೇ ಹಬ್ಬಿಸುತ್ತಿರುವ ಸುಳ್ಳು ಸು್ದಿ ಎಂದಿದ್ದಾರೆ..
ಅಲ್ದೇ ಕನ್ನಡ ಸಿನಿಮಾಗಳ ಮೇಲೆ ರಶ್ಮಿಕಾಗೆ ಅಸಡ್ಡೆ ಎಂಬ ವಿಚಾರವಾಗಿ ಎದುರಾದ ಪ್ರಶ್ನೆಗೆ ಉತ್ತರಿಸುತ್ತಾ , ಕನ್ನಡ ಸಿನಿಮಾಗಳ ಬಗ್ಗೆ ನನಗೆ ಯಾವಾಗಲೂ ಪ್ರೀತಿ ಇದ್ದೇ ಇರುತ್ತದೆ. ವಾಸ್ತವ ತಿಳಿದುಕೊಳ್ಳದೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ..
ಅಲ್ದೇ ಕಾಂತಾರ ಸಿನಿಮಾ ನೋಡಿಲ್ಲ ಎಂದು ನೆಟ್ಟಿಗರು ರಶ್ಮಿಕಾರನ್ನ ಹಿಗ್ಗಾಶಮುಗ್ಗಾ ಜರಿದಿದ್ದರು.. ಇದಕ್ಕೂ ಪ್ರತಿಕ್ರಿಯೆ ನೀಡಿದ ರಶ್ಮಿಕಾ ಕಾಂತಾರ ಬಿಡುಗಡೆಯಾದ ಎರಡು ದಿನಕ್ಕೆ ಸಿನಿಮಾ ನೋಡಿದ್ರಾ ಎಂದು ಕೇಳಿದ್ದರು. ನೋಡಿರಲಿಲ್ಲ. ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಆ ನಂತರ ಸಿನಿಮಾ ನೋಡಿ ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು ಎಂದಿದ್ದಾರೆ..
Rashmika reacts on netizens troll about her neglating kannada films – cinibazaar