ನಟ ಶರತ್ ಕುಮಾರ್ ಆರೋಗ್ಯದಲ್ಲಿ ಏರುಪೇರು
ಚೆನ್ನೈ ಆಸ್ಪತ್ರೆಗೆ ದಾಖಲು
ಡಯಾಬಿಟಿಸ್ ನಿಂದ ಬಳಲುತ್ತಿರುವ ನಟ
ಬಹುಭಾಷಾ ನಟನ ಆರೋಗ್ಯ ಸ್ಥಿತಿ ಗಂಭೀರ
ರಾಜಕುಮಾರ , ಸಾರಥಿ ನಟ
ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಸಾರಥಿ , ರಾಜಕುಮಾರ , ಜೇಮ್ಸ್ ಸೇರಿ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿ ಮಿಂಚಿರುವ ಬಹುಭಾಷಾ ನಟ ಶರತ್ ಕುಮಾರ್ ರ ಆರೋಗ್ಯದಲ್ಲಿ ಏರುಪೇರಾಗಿದೆ..
ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು , ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿದುಬಂದಿದೆ.. ಅವರು ಡಯಾರಿಯಾ, ಡಿಹೈಡ್ರೇಷನ್ನಿಂದ ಬಳಲುತ್ತಿದ್ದಾರೆ..
ಶರತ್ ಕುಮಾರ್ ಅವರಿಗೆ 68 ವರ್ಷ ವಯಸ್ಸು.. ಅವರ ಅನಾರೋಗ್ಯ ಸುದ್ದಿ ತಿಳಿದು ಅಭಿಮಾನಿಗಳು ಆತಂಕಗೊಂಡಿದ್ದು ಅವರು ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ಬೇಡಿಕೊಳ್ತಿದ್ದಾರೆ..
ಅವರನ್ನ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಮತ್ತು ಪುತ್ರಿ ವರಲಕ್ಷ್ಮೀ ಆಸ್ಪತ್ರೆಗೆ ದೌಡಾಯಿಸಿದ್ದಾರೆ..
Sharath Kumar,actor’s health condition is critical – updates