KGF2 : ಡಬ್ಬಿಂಗ್ ಕಂಪ್ಲೀಟ್ ಮಾಡಿದ ಖುಷಿಯಲ್ಲಿ ‘ಅಧೀರ’..!
ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಎದುರುನೋಡ್ತಿರುವ ಪ್ಯಾನ್ ಇಂಡಿಯಾ ಸಿನಿಮಾ KGF2. ಈ ಸಿನಿಮಾದಲ್ಲಿ ಸಂಜಯ್ ದತ್ ಅವರ ಅಧೀರನ ಪಾತ್ರ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಅಧೀರ ಹಾಗೂ ರಾಕಿ ಭಾಯ್ ಕಾದಾಟವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.. ಸಿನಿಮಾ ಏಪ್ರಿಲ್ 14 ಕ್ಕೆ ತೆರೆಕಾಣಲಿದೆ.. ಈ ನಡುವೆ ಅಧೀರನಿಗೆ ಸಂಜು ಬಾಬಾ ಡಬ್ಬಿಂಗ್ ಕೊಟ್ಟು ಮುಗಿಸಿರುವ ಖುಷಿಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..
ಅಲ್ಲದೇ ‘ಅಧೀರನ ಪಾತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಕೆಜಿಎಫ್ -2 ಚಿತ್ರಮಂದಿರಗಳಿಗೆ ಲಗ್ಗೆ ಇಡಲಾಗಿದೆ ‘ ಎಂದು ಬರೆದುಕೊಂಡಿದ್ದಾರೆ..
ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ… ವಶಿಷ್ಠ ಸಿಂಹ , ಪ್ರಕಾಶ್ ರಾಜ್ , ಮಾಳವಿಕಾ ಅವಿನಾಶ್ , ರವೀಕಾ ಸೇನ್ ಸೇರಿದಂತೆ ಸ್ಟಾರ್ ನಟರ ದಂಡೇ ಇದೆ..
ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿ ಮೂಡಿಬಂದಿರುವ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ರೆಕಾರ್ಡ್ ಗಳನ್ನ ಮಾಡಿದೆ… ಚಿತ್ರಕ್ಕೆ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡಿದ್ದು, ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ..