Hamsa-nandini | ನಾನು ಇನ್ನೂ ಗೆದ್ದಿಲ್ಲ .. ಕ್ಯಾನ್ಸರ್ ಟ್ರಿಟ್ ಮೆಂಟ್ ಬಗ್ಗೆ ನಟಿ ರಿಯಾಕ್ಷನ್
ಟಾಲಿವುಡ್ ನ ಖ್ಯಾತ ನಟಿ ಹಂಸಾ ನಂದಿನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತಮ್ಮ ಚಿಕಿತ್ಸೆ ಬಗ್ಗೆ ಇನ್ ಸ್ಟಾದಲ್ಲಿ ಮಾಹಿತಿ ನೀಡಿದ್ದಾರೆ.
16 ಸೈಕಿಲ್ಸ್ ಜೊತೆಗೆ ಕಿಮೊಥೆರಪಿ ಮಾಡಿದ್ದಾರೆ. ಈಗ ನಾನು ಅಧಿಕೃತವಾಗಿ ಕೀಮೋದಿಂದ ಚೇತರಿಸಿಕೊಂಡಿದ್ದೇನೆ.
ಆದರೆ ಚಿಕಿತ್ಸೆ ಇನ್ನೂ ಮುಗಿದಿಲ್ಲ. ನಾನು ಇನ್ನೂ ಗೆದ್ದಿಲ್ಲ. ಮುಂದಿನ ಹೋರಾಟಕ್ಕೆ ಸಿದ್ಧವಾಗಬೇಕಾದ ಕ್ಷಣ ಇದು.
ಸರ್ಜರಿಗಳಿಗೆ ಸಿದ್ಧವಾಗುವ ಸಮಯವಿದು ಎಂದು ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನು ನೋಡಿದ ನೆಟಿಜನ್ಗಳು ನೀವು ಇನ್ನಷ್ಟು ಗಟ್ಟಿಯಾಗಿ ವಾಪಸ್ ಆಗುತ್ತೀರಿ. ಗೆಟ್ ವೆಲ್ ಸೂನ್ ಎಂದಿದ್ದಾರೆ.
ಆರ್ಯನ್ ರಾಜೇಶ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಅನುಮಾನಸ್ಪದಂ’ ಮೂಲಕ ನಾಯಕಿಯಾಗಿ ಪರಿಚಯವಾದ ಹಂಸಾನಂದಿನಿ ‘ಮಿರ್ಚಿ, ಅತ್ತಾರಿಂಟಿಕಿ ದಾರೇದಿ’ ಚಿತ್ರಗಳಲ್ಲಿ ವಿಶೇಷ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದರು.
hamsa-nandini-cancer-treatment