ಬಾಕ್ಸ್ ಆಫಿಸ್ ನಲ್ಲಿ 150 ಕೋಟಿಗೂ ಹೆಚ್ಚು ಗಳಿಕ ಮಾಡಿದ ಭೀಮ್ಲಾ ನಾಯಕ್…
ತ್ರಿವಿಕ್ರಮ್ ಮಾರ್ಗದರ್ಶನದಲ್ಲಿ ಸಾಗರ್ ಕೆ ಚಂದ್ರು ನಿರ್ದೇಶನದಲ್ಲಿ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟನೆಯ ಭೀಮ್ಲಾ ನಾಯಕ್ ಬ್ಲಾಕ್ ಬಾಸ್ಟರ್ ಚಿತ್ರವಾಗಿ ಮೂಡಿಬಂದಿದೆ. ಹಲವು ವರ್ಷಗಳ ಬಳಿಕ ಪವನ್ ಕಲ್ಯಾಣ್ ಪವರ್ ಫುಲ್ ಕಂಬ್ಯಾಕ್ ಮಾಡಿದ್ದಾರೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿಯಾಗಿ ಗಳಿಕೆ ಮಾಡುತ್ತಿದೆ. ಬಿಡುಗಡೆಯಾದ ಐದೇ ದಿನಗಳಲ್ಲಿ ಚಿತ್ರ ಯಶಸ್ವಿಯಾಗಿ 150 ಕೋಟಿ ರುಪಾಯಿ ಕಮಾಯಿ ಮಾಡಿ ಮುನ್ನುಗ್ಗುತ್ತಿದೆ. ಮೂಲ ಮಲಯಾಳಂ ಚಿತ್ರ ಅಯ್ಯಪ್ಪನುಮ್ ಕೊಶಿಯುಮ್, ರೀಮೇಕ್ ಆಗಿದ್ದಾರೂ, ಭೀಮ್ಲಾ ನಾಯಕ್ ತನ್ನದೇ ಚಾಪು ಮಾಡುವಲ್ಲಿ ಯಶಸ್ವಿಯಾಗಿದೆ.
ಭಾರೀ ನಿರೀಕ್ಷೆಗಳ ನಡುವೆ ಭೀಮ್ಲಾ ನಾಯಕ್ ಫೆಬ್ರವರಿ 25 ರಂದು ಜಗತ್ತಿನಾದ್ಯಂತ ಥಿಯೇಟರ್ಗಳಿಗೆ ಅಪ್ಪಳಿಸಿತು. ಪವನ್ ಕಲ್ಯಾಣ್ ಪೊಲೀಸ್ ಆಫಿಸರ್ ಆಗಿ ಸಿನಿಮಾದ ಶೀರ್ಷಿಕೆ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಣಾ ದಗ್ಗುಬಾಟಿ ಡೇನಿಯಲ್ ಶೇಖರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಸಿನಿಮಾಗಳ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ ಭೀಮ್ಲಾ ನಾಯಕ್ ಐದು ದಿನಗಳಲ್ಲಿ 16 ಕೋಟಿ (ಅಂದಾಜು) ಗಳಿಸುವ ಮೂಲಕ USA ನಲ್ಲಿ ಅತಿ ಹೆಚ್ಚು ಗಳಿಸಿದ ಪವನ್ ಕಲ್ಯಾಣ್ ಚಿತ್ರವಾಗಿದೆ.
ಸಿನಿಮಾ ಟ್ರೇಡ್ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ರಿಲೀಸ್ ಆದ ದಿನದಿಂದ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ನ ಲಿಸ್ಟ್ ಮಾಡಿದ್ದಾರೆ.
ಬಾಕ್ಸ್ ಆಫೀಸ್ ದಿನ 1 – ರೂ 61.24 ಕೋಟಿ.
ದಿನ 2 – ರೂ 32.51 ಕೋಟಿ.
ದಿನ 3 – ರೂ 34.63 ಕೋಟಿ.
ದಿನ 4 – ರೂ 13.70 ಕೋಟಿ.
ಒಟ್ಟು – ರೂ 142.08 ಕೋಟಿ (sic).”
ಸಿನಿಮಾದಲ್ಲಿ ಪವನ್ ಕಲ್ಯಾಣ್ ಮಲಯಾಳಂ ಆಕ್ಟರ್ ಬಿಜು ಮೆನನ್ ಅವರ ಪೊಲೀಸ್ ಯುನಿಫರ್ಮ್ ಧರಿಸಿದ್ದಾರೆ. ರಾಣಾ ದಗ್ಗುಬಾಟಿ ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರವನ್ನು ಪುನರಾವರ್ತಿಸಿದ್ದಾರೆ. ಅಯ್ಯಪ್ಪನುಂ ಕೊಶಿಯುಂ ಚಿತ್ರದ ರಿಮೇಕ್ನಲ್ಲಿ ನಿತ್ಯಾ ಮೆನನ್, ಸಂಯುಕ್ತಾ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಭೀಮ್ಲಾ ನಾಯಕ್ಗೆ ಎಸ್ಎಸ್ ಥಮನ್ ಸಂಗೀತ ನೀಡಿದ್ದು, ಚಿತ್ರದ ಕ್ರೇಜ್ ಹೆಚ್ಚಾಗುವಲ್ಲಿ ಸಹಾಯ ಮಾಡಿತು..
Bheemla Nayak box office collection Day 5: Pawan Kalyan film continues its dream run.