ಬಜೆಟ್ ನಲ್ಲಿ ಸಿನಿಮಾರಂಗಕ್ಕೆ ಸಿಕ್ಕಿದ್ದೇನು..??
ಸಿಎಂ ಬಸಸವರಾಜ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಬಂಡನೆ ಮಾಡಿದರು. ವಿಧಾನಸಭೆಯಲ್ಲಿ ಮಂಡಿಸಿದ 2022 ರ ಸಾಲಿನ ರಾಜ್ಯ ಬಜೆಟ್ ನಲ್ಲಿ ಮಹತ್ವಾಕಾಂಕ್ಷೆ ಯೋಜನೆಗಳನ್ನೂ ಘೋಷಿಸಿದರು…ವಿವಿಧ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಅಂತೆಯೇ ಸಿನಿಮಾ ಇಂಡಸ್ಟ್ರಿಗೂ ಭರ್ಜರಿ ಗಿಫ್ಟ್ ನೀಡಿದ್ದಾರೆ. ಪ್ರಸ್ತುತ ವಾರ್ಷಿಕ 125 ಚಿತ್ರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು 200ಕ್ಕೆ ಏರಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೋವಿಡ್ ನಿಂದ ನಿರ್ಮಾಪಕರು ಭಾರೀ ಹಾನಿಗೊಳಗಾಗಿದ್ದಾರೆ. ಹಾಗಾಗಿ 175 ಚಿತ್ರಗಳಿಗೆ ವಾರ್ಷಿಕ ಸಬ್ಸಿಡಿ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಸರ್ಕಾರ ಇನ್ನೂ 25 ಚಿತ್ರಗಳನ್ನು ಸೇರಿಸಿ 200 ಚಿತ್ರಗಳಿಗೆ ಸಬ್ಸಿಡಿ ಕೊಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.