Sandalwood : ರಶ್ಮಿಕಾಗೆ ಮೊದಲ ಸೋಲು…??
ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ.. ಅದಾದ ನಂತರ ರಶ್ಮಿಕಾ ವರ್ಚಸ್ಸು ಹೆಚ್ಚಾಗಿದೆ.. ಆದ್ರೆ ಈಗ ಪುಷ್ಪಾ ಸಿನಿಮಾದ ಬಳಿಕ ರಿಲೀಸ್ ಆಗಿರುವ ರಶ್ಮಿಕಾ ಹಾಗೂ ಶರ್ವಾನಂದ್ ಅಭಿನಯದ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ಎಲ್ಲರೂ ಅಂದುಕೊಂಡಂತೆ ಕಮಾಲ್ ಮಾಡಿಲ್ಲ.. ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಯಾವುದೇ ಮ್ಯಾಜಿಕ್ ಮಾಡಿಲ್ಲ.. ಮಾರ್ಚ್ 04 ರಂದು ತೆರೆಕಂಡ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ.. ಹೀಗಾಗಿ ರಶ್ಮಿಕಾಗೆ ಇದು ಮೊದಲ ಸೋಲು ಅಂತಲೇ ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ.
ವಿಶ್ವಾದ್ಯಂತ ರಿಲೀಸ್ ಆಗಿರೋ ಈ ಸಿನಿಮಾದ ಬಜೆಟ್ 14 ಕೋಟಿ ರೂ. ಮೊದಲ ದಿನ ಒಟ್ಟಾರೆಯಾಗಿ ವಿಶ್ವಾದ್ಯಂತ ಗಳಿಸಿರುವುದು ಕೇವಲ 3. 60 ಕೋಟಿ ನಿರ್ಮಾಕರಿಗೆ ಸಿಕ್ಕಿದ್ದು 1.92 ಕೋಟಿ ರೂ ಮಾತ್ರ.. ಕರ್ನಾಟಕದಲ್ಲಿ ಮೊದಲ ದಿನ ಕೇವಲ 12 ಲಕ್ಷ ಕಲೆಕ್ಷನ್ ಆಗಿದೆ ಎನ್ನಲಾಗಿದೆ.ಆಂಧ್ರ-ತೆಲಂಗಾಣದಲ್ಲಿ ಫಸ್ಟ್ ಡೇ ಕಲೆಕ್ಷನ್ 2.90 ಕೋಟಿ ರೂ. ಮಾತ್ರ. ವಿದೇಶಗಳಲ್ಲಿ 23 ಲಕ್ಷ ರೂ. ಮಾತ್ರ ಗಳಿಕೆ ಕಂಡಿದೆ.