ಹಾಲಿವುಡ್ ಇನ್ಮುಂದೆ ಕಿಚ್ಚನ ಸಿನಿಮಾಳ ಸೌಂಡ್..
ಅನೂಪ್ ಭಂಡಾರಿ ಕಿಚ್ಚನ ಕಾಂಬಿನೇಷನ್ ನ ವಿಕ್ರಾಂತ್ ರೋಣ ಅಂತೂ ಬುರ್ಜ್ ಖಲೀಫಾದಲ್ಲಿ ಟೈಟಲ್ ಮೋಷನ್ ಪೋಸ್ಟರ್ ಲಾಂಚ್ ನಿಂದ ಹಿಡಿದು , 3ಡಿ ವರ್ಷನ್ ನ ಸಿನಿಮಾ ಅಅನ್ನೋದು ಸೇರಿದಂತೆ ಸಾಕಷ್ಟು ವಿಚಾರಗಳಿಂದ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.. ಈ ಸಿನಿಮಾದ ಗ್ಲಿಂಪ್ಸ್ ಮಾತ್ರವೇ , ವಿಶ್ವದ ಗಮನ ಸೆಳೆದಿದೆ.. ಹಾಲಿವುಡ್ ಲೆವೆಲ್ ನಲ್ಲಿ ಸೌಂಡ್ ಮಾಡಿದೆ.. ಫ್ಯಾಂಟಸಿ ಥ್ರಿಲ್ಲರ್ ಆಗಿರುವ ಈ ಸಿನಿಮಾ ಇಂಗ್ಲಿಷ್ ನಲ್ಲೂ ಡಬ್ ಆಗ್ತಿದೆ ಅನ್ನೋ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು… ಇದ್ರಿಂದ ಕಿಚ್ಚನ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿತ್ತು..
ಆದ್ರೀಗ ಮತ್ತೊಂದು ಸೆನ್ಷೇಷನಲ್ ಸುದ್ದಿ ಒಂದು ಕಿಚ್ಚನ ಬಗ್ಗೆ ಹರಿದಾಡ್ತಿದೆ.. ಅದೇನೆಂದ್ರೆ ವಿಕ್ರಾಂತ್ ರೋಣನ ನಂತರ ಕಿಚ್ಚನ ಮುಂದಿನ ಬಹುತೇಕ ಸಿನಿಮಾಗಳು ಇಂಗ್ಲಿಷ್ ಗೂ ಸಹ ಡಬ್ ಆಗಲಿವೆ ಅನ್ನೋದು.. ಈ ಮೂಲಕ ಹಾಲಿವುಡ್ ನಲ್ಲೂ ಹವಾ ಸೃಷ್ಟಿಸಲಿದ್ದಾರೆ ಕಿಚ್ಚ..
ಅಂದ್ಹಾಗೆ ವಿಕ್ರಾಂತ್ ರೋಣನ ಇಂಗ್ಲಿಷ್ ಡಬ್ಬಿಂಗ್ ಕೂಡ ಮುಗಿದಿದೆ.. ಮತ್ತೊಂದು ವಿಶೇಷತೆ ಅಂದ್ರೆ ತಮ್ಮ ಪಾತ್ರಕ್ಕೆ ಇಂಗ್ಲಿಷ್ ವರ್ಷನ್ ಗೆ ಖುದ್ದು ಸುದೀಪ್ ಅವರೇ ಧ್ವನಿ ನೀಡುವ ಮೂಲಕ ಕನ್ನಡದ ಮೊದಲ ಸೂಪರ್ ಸ್ಟಾರ್ ಆಗಿದ್ದಾರೆ.. ಈ ವಿಚಾರದಲ್ಲಿ ಭಾರತದ ಕೆಲವೇ ಕೆಲವು ನಟರ ಪೈಕಿ ಒಬ್ಬರೆಂಬ ದಾಖಲೆ ಬರೆದಿದ್ದಾರೆ. ಈ ಅಂಶಗಳನ್ನ ಗಮನಿಸಿದ್ರೆ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾಗಳು ಅಂತಲೇ ಹೇಳಬಹುದು..
ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗಳಾದ ಬಿಲ್ಲ ರಂಗ ಭಾಷಾ , ಅಶ್ವತ್ಥಾಮ ಸಿನಿಮಾಗಳು ಸಹ ಇಂಗ್ಲಿಷ್ ನಲ್ಲೂ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಿದದಾಡುತ್ತಿದೆ.. ಅಂದ್ಹಾಗೆ ಈ ಸಿನಿಮಾಗಳಿಗೂ ಸಹ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ..