ವಿದೇಶಗಳಲ್ಲೂ ಕಿಕ್ ಕೊಡಲಿದೆ ಅದಿತಿ – ಶ್ರೀನಿ ಓಲ್ಡ್ ಮಾಂಕ್
ಶ್ರೀನಿ ನಿರ್ದೇಶಿಸಿ ನಟಿಸಿರುವ ಓಲ್ಡ್ ಮಾಂಕ್ ಚಿತ್ರ ರಾಜ್ಯಾದ್ಯಂತ ಕಳೆದ ವಾರ ಬಿಡುಗಡೆಯಾಗಿತ್ತು. ಮೊದಲಿಗೆ ಥಿಯೇಟರ್ ಗಳ ಸಂಖ್ಯೆ ಕಡಿಮೆಯಿತ್ತಾದರೂ ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ.
ಚಿತ್ರತಂಡ ಪ್ರಚಾರಾರ್ಥವಾಗಿ ಪತ್ರಿಕಾ ಗೋಷ್ಠಿ ಹಮ್ಮಿಕೊಂಡಿತ್ತು. ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಾರೆ. ಆದರೆ ನಾವು ಸಕ್ಸಸ್ ಸಿಗಲಿ ಎಂದು ಮಾಡುತ್ತಿದ್ದೇವೆ. ಎನ್ನುತ್ತಲೇ ಮಾತು ಶುರುಮಾಡಿದ್ರೂ, ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆನಡಾ, ಯು.ಎಸ್.ಎ ಹಾಗೂ ಆಸ್ಟ್ರೇಲಿಯಾದಲ್ಲೂ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.
ಶ್ರೀನಿ ಮಾತಿಗೆ ಜೊತೆಗೂಡಿಸಿದ ನಾಯಕಿ ಅದಿತಿ ಪ್ರಭುದೇವ, ಉತ್ತಮ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು.
ಓಲ್ಡ್ ಮಾಂಕ್ ಸಿನಿಮಾ ಥಿಯೇಟರ್ ಗಳ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳುತ್ತಿದೆ. ಅದರ ಜೊತೆ ಪರಭಾಷಾ ಸಿನಿಮಾಗಳ ಆತಂಕವೂ ಮುಂದುವರೆದಿದೆ. ಕನ್ನಡ ಚಿತ್ರವನ್ನ ಮೊದಲು ನೋಡಿ ಆನಂತರ ಪರಭಾಷಾ ಸಿನಿಮಾಗಳನ್ನ ನೋಡಿ ಎಂದು ಚಿತ್ರತಂಡ ಕೇಳಿಕೊಂಡಿತು.
ಓಲ್ಡ್ ಮಂಕ್ ಸಿನಿಮಾ ಚೆನ್ನಾಗಿದೆ, ಚಿತ್ರವನ್ನ ಗೆಲ್ಲಿಸುವುದು ಪ್ರೇಕ್ಷಕರ ಕೈಯಲ್ಲಿದೆ…