ಗಂಗಾ ನದಿಯಲ್ಲಿ ಲತಾ ಮಂಗೇಶ್ಕರ್ ಚಿತಾಭಸ್ಮ ವಿಸರ್ಜನೆ..
ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಚಿತಾಭಸ್ಮಾವನ್ನ ವಾರಣಾಸಿ ಕಾಶಿ ಸನ್ನಿಧಾನದ ಬಳಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಫೆಬ್ರವರಿ 6 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಾಯಕಿ ಲತಾ ಮಂಗೇಶ್ಕರ್ ಕೊನೆಯುಸಿರೆಳೆದಿದ್ದರು. ಅವರ ಚಿತಾಭಸ್ಮವನ್ನು ಅವರ ಕುಟುಂಬ ಸದಸ್ಯರು ವಾರಣಾಸಿಯ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಿದರು.
ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಮತ್ತು ಹಲವಾರು ಕುಟುಂಬ ಸದಸ್ಯರು ವಾರಣಾಸಿಗೆ ತೆರಳಿ ಆಚರಣೆಯಲ್ಲಿ ಪಾಲ್ಗೊಂಡರು. ಕುಟುಂಬ ಸದಸ್ಯರು ಖಿಡ್ಕಿಯಾ ಘಾಟ್ನಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡು ಅಹಲ್ಯಾಬಾಯಿ ಘಾಟ್ಗೆ ತೆರಳಿ ಧಾರ್ಮಿಕ ಕ್ರಿಯೆ ಪೂರ್ಣಗೊಳಿಸಿದರು..
ಜನವರಿಯಲ್ಲಿ ಕೋವಿಡ್ -19 ವರದಿಯಲ್ಲಿ ಪಾಸಿಟಿವ್ ಬಂದ ನಂತರ ಲತಾ ಮಂಗೇಶ್ಕರ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಫೆಬ್ರವರಿ 6 ರಂದು 92 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಇದಕ್ಕೂ ಮೊದಲು, ಅವರ ಚಿತಾಭಸ್ಮವನ್ನು ಅವರ ಕುಟುಂಬ ಸದಸ್ಯರು ನಾಸಿಕ್ನ ಗೋದಾವರಿಯಲ್ಲಿ ವಿಸರ್ಜನೆ ಮಾಡಿದ್ದರು.
ನಾಸಿಕ್ ನಂತರ, ಲತಾ ಅವರ ಕುಟುಂಬ ಗಂಗಾ ನದಿಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲು ವಾರಣಾಸಿಯನ್ನು ತಲುಪಿದೆ. ಅರ್ಚಕ ಶ್ರೀಕಾಂತ್ ಪಾಠಕ್ ಅವರ ಸೂಚನೆಯಂತೆ ಉಷಾ ಮಂಗೇಶ್ಕರ್ ಮತ್ತು ಇತರ ಕುಟುಂಬ ಸದಸ್ಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
Lata Mangeshkar’s ashes immersed in Ganga, Varanasi