The kashmir Files VS Bacchhan pande – ಬಾಕ್ಸ್ ಆಫೀಸ್ ಕಲೆಕ್ಷನ್
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿರೋ ದಿ ಕಾಶ್ಮೀರ್ ಫೈಲ್ಸ್ ಒಂದ್ಕಡೆಯಾದ್ರೆ , ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಸಿನಿಮಾ ಮತ್ತೊಂಡ್ಕಡೆ.. ಎರೆಡೂ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣ್ತಿದ್ದು , ಬಾಕ್ಸ್ ಆಫೀಸ್ ನಲ್ಲಿ ಎರೆಡೂ ಸಿನಿಮಾಗಳ ನಡುವೆ ಭಾರೀ ಫೈಟ್ ಇದೆ..
ಕಾಶ್ಮೀರ ಫೈಲ್ಸ್ ಚಿತ್ರ ಬಿಡುಗಡೆಯಾಗಿ 13 ದಿನಗಳು ಕಳೆದಿವೆ, ಬಚ್ಚನ್ ಪಾಂಡೆ ಕಳೆದ ವಾರ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಕಾಶ್ಮೀರ ಫೈಲ್ಸ್ ಬಚ್ಚನ್ ಪಾಂಡೆ ಸಿನಿಮಾವನ್ನ ಹಿಂದಿಕ್ಕಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಬುಧವಾರ ಸುಮಾರು 9 ಕೋಟಿ ರೂ. ಗಳಿಕೆ ಮಾಡಿದೆ. ಇಲ್ಲಿಯವರೆಗೆ ಬಾಕ್ಸ್ ಆಫೀಸ್ ನಲ್ಲಿ 199 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.
ದಿ ಕಾಶ್ಮೀರ್ ಫೈಲ್ಸ್ ಭಾರತದ ಬಾಕ್ಸ್ ಆಫೀಸ್ 200 ಕೋಟಿಯನ್ನ ಗಳಿಸಿ ದಾಖಲೆ ನಿರ್ಮಿಸಲಿದೆ. ಹಿಂದಿಯಲ್ಲಿ ಸತತ 13 ನೇ ದಿನವೂ ಭರ್ಜರಿ ಬ್ಯುಸಿನೆಸ್ ಮಾಡಿದ ಚಿತ್ರಗಳ ಪೈಕಿ ‘ಬಾಹುಬಲಿ 2’ ಮೊದಲ ಸ್ಥಾನದಲ್ಲಿದೆ.
ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರ ಬುಧವಾರದಂದು ಗಳಿಕೆಯಲ್ಲಿ ಕೊಂಚ ಕುಸಿತ ಕಂಡಿದೆ. ಮಂಗಳವಾರದಂದು ಸುಮಾರು ಮೂರು ಕೋಟಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ಬುಧವಾರದಂದು ಅದಕ್ಕಿಂತಲೂ ಕಡಿಮೆ ಗಳಿಕೆ ಮಾಡಿದೆ. ಆರನೇ ದಿನ ಬುಧವಾರ ‘ಬಚ್ಚನ್ ಪಾಂಡೆ’ ಸುಮಾರು 2.70 ಕೋಟಿ ಕಲೆಕ್ಷನ್ ಮಾಡಿದೆ.
ಮೊದಲ ವಾರದ ಅಂತ್ಯಕ್ಕೆ 50 ಕೋಟಿ ಕಲೆಕ್ಷನ್ ಮಾಡಲು’ಬಚ್ಚನ್ ಪಾಂಡೆ’ ಹೆಣಗಾಡುತ್ತಿದೆ. ‘ಬಚ್ಚನ್ ಪಾಂಡೆ’ ಮೊದಲ ದಿನ 13.35 ಕೋಟಿ, ಎರಡನೇ ದಿನ 12 ಕೋಟಿ ಮತ್ತು ಮೂರನೇ ದಿನ – ಭಾನುವಾರ 12 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲಿಂದೀಚೆಗೆ ಚಿತ್ರದ ಗಳಿಕೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ.