ಮಲಯಾಳಂ ‘ಹೃದಯಂ’ ನ ಮೂರೂ ಭಾಷೆಗಳ ಹಕ್ಕು ಪಡೆದ ಕರಣ್
ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ನಿರ್ಮಾಣ ಬ್ಯಾನರ್ ಧರ್ಮ ಎಂಟರ್ಟೈನ್ಮೆಂಟ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನ ಮೂಲಕ ಮಲಯಾಳಂ ಚಲನಚಿತ್ರ ಹೃದಯಂನ ರೀಮೇಕ್ ಹಕ್ಕುಗಳನ್ನು ಪಡೆದಿರುವುದಾಗಿ ಎಂದು ಘೋಷಿಸಿದ್ಧಾರೆ.
ವಿನೀತ್ ಶ್ರೀನಿವಾಸನ್ ನಿರ್ದೇಶನದಲ್ಲಿ ಮಾಲಿವುಡ್ ಸ್ಟಾರ್ ಮೋಹನ್ ಲಾಲ್ ಅವರ ಪುತ್ರ ನಟ ಪ್ರಣವ್ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಡಿದ್ದ, ದರ್ಶನಾ ರಾಜೇಂದ್ರನ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ನಾಯಿಕರಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾ ಇದೇ ವರ್ಷ ಜನವರಿ 21 ರಂದು ವಿಶ್ವಾದ್ಯಂತ ತೆರೆ ಕಂಡು ಕಮರ್ಷಿಇಯಲ್ ಹಿಟ್ ಆಯಿತು..
ಇದೀಗ ಕರಣ್ ಜೋಹರ್ ಹಿಂದಿ, ತಮಿಳು ಮತ್ತು ತೆಲುಗು ಮೂರು ಭಾಷೆಗಳಿಗೆ ಚಲನಚಿತ್ರದ ಹಕ್ಕುಗಳನ್ನು ಖರೀದಿಸುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. “ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ.. ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ , ಮುಂದಿನ ಪೀಳಿಗೆಯ ಮೇಲೆ ಕೇಂದ್ರೀಕೃತಗೊಂಡಿರುವ ಪ್ರೇಮಕಥೆಯಯಾದ ಹೃದಯಮ್ ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಖಚಿತ ಪಡಿಸಿದ್ದಾರೆ..