Vikranth Rona : ಎಲ್ಲಾ ಭಾಷೆಯಲ್ಲೂ ಸೂಪರ್ ಸ್ಟಾರ್ ಗಳಿಂದ ಟೀಸರ್ ಲಾಂಚ್
ವಿಕ್ರಾಂತ್ ರೋಣ… ಕಿಚ್ಚ ಸುದೀಪ್ ಅಭಿನಯದ ಭಾರತೀಯ ಸಿನಿಮಾರಂಗದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ… ಈ ಸಿನಿಮಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿದೆ.. ಬರೀ ಗ್ಲಿಂಪ್ಸ್ ಮೂಲಕವೇ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿರುವ ಈ ಸಿನಿಮಾದ TiTle ಲಾಂಚ್ ಆಗಿದ್ದು , ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ… 3ಡಿ ತಂತ್ರಜ್ಞಾನದಲ್ಲಿ ಮೂಡಡಿರುತತ್ತಿರುವ ಈ ಸಿನಿಮಾ ಅನೇಕ ವಿಚಾರಗಳಿಂದ ಜಗತ್ತಿನ ಗಮನ ಸೆಲೆದಿದೆ..
ಅಂದ್ಹಾಗೆ ಸಿನಿಮಾದ ಟೀಸರ್ ಏಪ್ರಿಲ್ 2 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ.. ಸಿನಿಮಾದ ಟೀಸರ್ ಐದೂ ಭಾಷೆಗಳಲ್ಲಿ ರಿಲೀಸ್ ಆಗ್ತಿದ್ದೂ ಐದೂ ಭಾಷೆಗಳಲ್ಲೂ ಸುಪರ್ ಸ್ಟಾರ್ ಗಳು ರಿಲೀಸ್ ಮಾಡಲಿರುವುದು ವಿಶೇಷ..
ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ರಿಲೀಸ್ ಮಾಡಿದ್ರೆ , ಮಲಯಾಳಂ ನಲ್ಲಿ ಸ್ಟಾರ್ ನಟ ಮೋಹನ್ ಲಾಲ್ ಅವರು ರಿಲೀಸ್ ಮಾಡ್ತಿದ್ದಾರೆ.. ತಮಿಳಿನಲ್ಲಿ ನಟ ಸಿಂಬು ರಿಲೀಸ್ ಮಾಡ್ತಿರೋದು ವಿಶೇಷ. ಈ ವಿಚಾರವನ್ನ ಸಿನಿಮಾತಂಡವೇ ಅಧಿಕೃತವಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ..
ಏಪ್ರಿಲ್ 2 ಬೆಳಿಗ್ಗೆ 9.55 ಕ್ಕೆ ಸರಿಯಾಗಿ ಟೀಸರ್ ರಿಲೀಸ್ ಆಗಲಿದೆ..