ಮಾರ್ಚ್ 25 ರಿಂದ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಮ್ಯಾಜಿಕ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ RRR ಸಿನಿಮಾವನ್ನ ನೋಡಿ ಬಾಲಿವುಡ್್ ಮಂದಿ ಕೂಡ ಶಾಕ್ ಆಗಿದ್ದಾರೆ.. ಇದೀಗ ಈ ಸಿನಿಮಾ ವೀಕ್ಷಿಸಿರುವ ಬಾಲಿವುಡ್ ನಟರಾದ ಅನಿಲ್ ಕಪೂರ್ , ಅನುಪಮ್ ಖೇರ್ ಈ ಸಿನಿಮಾವನ್ನ ಕೊಂಡಾಡಿದ್ಧಾರೆ..
ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ RRR ವೀಕ್ಷಿಸಲು ಥಿಯೇಟರ್ಗೆ ಹೋಗಿದ್ದರು. ಬಳಿಕ ಈ ಸಿನಿಮಾದ ಬಗ್ಗೆ ರಿವ್ಯೂ ನೀಡಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ..
ಅನುಪಮ್ ಖೇರ್ :
“ ಎಂತಹ ಅದ್ಭುತ ಮನರಂಜನೆಯ ಸಿನಿಮಾ. ಹೆಚ್ಚಿನ ಕಂಟೆಂಟ್, ಅಧ್ಬುತ ಸ್ಕ್ರೀನ್ ಪ್ಲೇ , ಹಾಡುಗಳು, ನೃತ್ಯಗಳು ಮತ್ತು ಆಕ್ಷನ್ ಸೀಕ್ವೆನ್ಸ್ಗಳು.. @AlwaysRamCharan & @tarak9999 #JrNTR ಇಬ್ಬರೂ ವಿದ್ಯುನ್ಮಾನವಾಗಿದ್ದಾರೆ. ಕ್ಲೈಮ್ಯಾಕ್ಸ್ ಇಷ್ಟವಾಯಿತು. ಇಡೀ ತಂಡಕ್ಕೆ ಮತ್ತು @jaantilalgada ಜೀ ಅವರಿಗೆ ಅಭಿನಂದನೆಗಳು.. ಜೈ ಹೋ!” ಎಂದಿದ್ದಾರೆ..
ಅನಿಲ್ ಕಪೂರ್
“ಇತ್ತೀಚಿನ ಕಾಲದ ಅತ್ಯಂತ ಮನರಂಜನೆಯ ಮತ್ತು ಅದ್ಭುತ ಚಲನಚಿತ್ರಗಳಲ್ಲಿ ಒಂದಾದ #RRR ಅನ್ನು ನೋಡಿದೆ. ನಿಜವಾಗಿಯೂ ಅದ್ಭುತ ಸಿನಿಮಾ. ವಿಶ್ವ ದರ್ಜೆಯ ಸಿನಿಮಾ! @ssrajamouli @ AlwaysRamCharan @ajaydevgn @aliaa08 @tarak9999 @DVVMovies @RRRMovie @jayantilalgada @PenMovies @RRRMovie” ಎಂದಿದ್ಧಾರೆ..