ಕಮಲ್ ಹಾಸನ್ ರ ಬಹುನಿರೀಕ್ಷೆಯ ಸಿನಿಮಾ ವಿಕ್ರಮದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಧೂಳೆಬ್ಬಿಸಿದೆ..
ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಫಹಾದ್ ಫಾಜಿಲ್ ಕೂಡ ನಟಿಸಿದ್ದಾರೆ.
ಮೂವರು ನಾಯಕರಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಈ ಸಿನಿಮಾದಲ್ಲಿ ನಾಯಕ ಸೂರ್ಯ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕಾಲಿವುಡ್ ನ ಲೇಟೆಸ್ಟ್ ಟಾಕ್.
ವಿಕ್ರಂ ಸಿನಿಮಾದಲ್ಲಿ ಸೂರ್ಯ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ಸೂರ್ಯ ‘ವಿಕ್ರಂ’ ಶೂಟಿಂಗ್ ಸ್ಥಳಕ್ಕೆ ಹೋದಾಗ ಕಮಲ್ ಅವರನ್ನು ಆತ್ಮೀಯವಾಗಿ ಆಹ್ವಾನಿಸಿದ ವಿಡಿಯೋ ಬಿಡುಗಡೆಯಾಗಿದೆ.
ಇದರೊಂದಿಗೆ ಸೂರ್ಯ ಅತಿಥಿ ಪಾತ್ರ ಮಾಡಿರುವುದು ಸ್ಪಷ್ಟವಾಗಿದೆ. ಜೂನ್ 3 ರಂದು ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.