ಸಿದ್ಧಾರ್ಥ್ ಸಿನಿಮಾ ಇಂಡಸ್ಟ್ರಿ ತೊರೆಯಲು ಮುಂದಾಗಿದ್ದಾರಾ…??
ಹಲವು ದಿನಗಳಿಂದ ಕೇವಲ ವಿವಾದಾತ್ಮಕ ಹೇಳಿಕೆಗಳನ್ನೇ ನೀಡಿ ಸುದ್ದಿಯಾಗ್ತಿರುವ , ಕಾಲಿವುಡ್ ನಟ ಸಿದ್ಧಾರ್ಥ್ ಅವರು ಇದೀಗ ಸಿನಿಮಾ ಇಂಡಸ್ಟ್ರಿ ತೊರೆಯಲಿದ್ಧಾರಾ ಎಂಬ ಚರ್ಚೆಗಳು ಜೋರಾಗಿವೆ.
ಸಂದರ್ಶನವೊಂದ್ರಲ್ಲಿ ಮಾತನಾಡಿರುವ ಸಿದ್ಧಾರ್ಥ್ ಅವರು ದೆಹಲಿಯ ಹುಡುಗ ಮತ್ತು ಹಿಂದಿಯಲ್ಲಿ ಬಹಳ ನಿರರ್ಗಳವಾಗಿ ಮಾತನಾಡುತ್ತಾರೆ ಎಂಬುದನ್ನು ಜನರು ಮರೆತುಬಿಡುತ್ತಾರೆ. ಅವರು ಸಾಕಷ್ಟು ಸೌತ್ ಚಿತ್ರಗಳನ್ನು ಮಾಡಿದ್ದಾರೆ ಮತ್ತು ಹಿಂದಿ ಚಿತ್ರರಂಗವು ಹವ್ಯಾಸವಾಗಿದೆ ಎಂದಿದ್ದಾರೆ..
ನಟನೆಗೆ ಉತ್ತಮ ಪಾತ್ರ ಸಿಗದಿದ್ದಲ್ಲಿ ನಟನೆಯನ್ನು ತೊರೆಯುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಸಿದ್ಧಾರ್ಥ್ 2003 ರಲ್ಲಿ ‘ಬಾಯ್ಸ್’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ತಮಿಳು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ನಿಧಾನವಾಗಿ ತೆಲುಗು ಮತ್ತು ಹಿಂದಿ ಚಲನಚಿತ್ರಗಳಲಲ್ಲೂ ನಟಿಸಿದರು.
ನೇರ ನೇರಾ ಮಾತನಾಡುವ ಸಿದ್ಧಾರ್ಥ್ ಯಾವುದೇ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ..
ಭಾಷಾ ಚರ್ಚೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ನಟ ಸಂದರ್ಶನದಲ್ಲಿ ಯಾವುದೇ ಉತ್ತಮ ಪಾತ್ರಗಳು ಸಿಗದಿದ್ದರೆ ಚಿತ್ರರಂಗವನ್ನು ತೊರೆಯುವುದಾಗಿ ಬಹಿರಂಗಪಡಿಸಿದ್ದಾರೆ.