ಕಿರುತೆರೆ ನಟಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಮಹತಿ ಭಟ್ SSLC ಯಲ್ಲಿ 625ಕ್ಕೆ 619 ಅಂಕಗಳನ್ನು ಗಳಿಸಿದ್ದಾರೆ.. ಶೇ.99 ಅಂಕ ಪಡೆದು ಪಾಸ್ ಆಗಿದ್ದಾರೆ. ಈ ಕುರಿತಯ ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹತಿಗೆ ಕನ್ನಡದಲ್ಲಿ 124, ಇಂಗ್ಲೀಷ್ ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನದಲ್ಲಿ 99 ಅಂಕ ಸಿಕ್ಕಿದೆ. ರಾಜ್ಯಾದ್ಯಂತ 7ನೇ ಸ್ಥಾನ ಪಡೆದಿದ್ದಾರೆ. ಧಾರಾವಾಹಿ ಶೂಟಿಂಗ್ ಮಧ್ಯೆ ಉತ್ತಮ ಅಂಕ ಪಡೆದಿರೋದಕ್ಕೆ ಮಹತಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಹತಿ, ನೀವು ಇಲ್ಲದೇ ಇದು ಅಸಾಧ್ಯ ಎಂದು ತಮ್ಮ ಕುಟುಂಬ ಮತ್ತು ಶಿಕ್ಷಕರಿಗೆ ಹಾಗೆಯೇ ಗಟ್ಟಿಮೇಳ ತಂಡಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.