James : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯದ ಜೇಮ್ಸ್ ಚಿತ್ರತಂಡದಿಂದ ಹೊಸ ಅಪ್ ಡೇಟ್ ಬಂದಿದೆ. ಅದೇನಂದರೇ ಇದೇ 11 ರಂದು ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಇದನ್ನ ಸ್ವತಃ ರಾಘಣ್ಣ ಅವರೇ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಘಣ್ಣ, ಫೆಬ್ರವರಿ 11ಕ್ಕೆ ಜೇಮ್ಸ್ ಟೀಸರ್, It’s time to say #BoloBoloJames ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಆಕ್ಷನ್ ಕಟ್ ನ ಜೇಮ್ಸ್ ಸಿನಿಮಾವನ್ನು ಮೊದಲಿಗೆ ಕನ್ನಡ ಭಾಷೆಯಲ್ಲಿ ನಿರ್ಮಾಣ ಮಾಡಲಾಗಿದೆ. ಅಪ್ಪು ಅಗಲಿಕೆಯ ಕಾರಣದಿಂದಾಗಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಷಯ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಕಂಡು ಬಂದಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಗಣರಾಜ್ಯೋತ್ಸವ ಪ್ರಯುಕ್ತ ರಿಲೀಸ್ ಆಗಿದ್ದ ಜೇಮ್ಸ್ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿತ್ತು. ಇದೀಗ ಫೆಬ್ರವರಿ 11ಕ್ಕೆ ಟೀಸರ್ ಬರಲಿದ್ದು, ಸ್ಯಾಂಡಲ್ ವುಡ್ ನ ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ ಎಂದು ಅಂದಾಜಿಸಲಾಗುತ್ತಿದೆ.
Love Mocktail 2 Release Update | ಮತ್ತೆ ಕಿಕ್ ಕೊಡುತ್ತಾ ಲವ್ ಮಾಕ್ಟೇಲ್…