ಆರ್ ಜಿವಿ…. ನಿರ್ದೇಶನದ ‘ಲಡಕಿ’ ಸಿನಿಮಾ ಐದೂ ಭಾಷೆಗಳಲ್ಲಿ ಬರುತ್ತಿದೆ.. ಕನ್ನಡದಲ್ಲಿ ಈ ಸಿನಿಮಾಗೆ ‘ಹುಡುಗಿ’ ಎಂಬ ಟೈಟಲ್ ಇಡಲಾಗಿದ್ದು , ಫೀಮೇಲ್ ಆಕ್ಷನ್ ಸಿನಿಮಾ ಇದಾಗಿದೆ… ಈ ಸಿನಿಮಾ ಮೂಲಕ ನಟಿ ಪೂಜಾ ಕನ್ನಡಕ್ಕೂ ಪಾದಾರ್ಪಣೆ ಮಾಡ್ತಾಯಿದ್ದಾರೆ.
ಜುಲೈ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ರಾಮ್ ಗೋಪಾಲ್ ಇತ್ತೀಚೆಗೆ ತಮ್ಮ ಟೀಮ್ ಜೊತೆಗೆ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರ ನಡೆಸಿದರು.
ಇದೀಗ ಪೂಜಾ ನಟಿ ಒಂದು ಬೋಲ್ಡ್ ಹೇಳಿಕೆ ನೀಡಿ ಸಂಚಲನವನ್ನ ಸೃಷ್ಟಿ ಮಾಡಿದ್ದಾರೆ.. ಹೌದು..! ಪೂಜಾ ಭಾಲೇಕರ್ ಸಿನಿಮಾದಲ್ಲೇ ಅಲ್ಲ ಪ್ರೆಸ್ ಮೀಈಟ್ ಗಳಲ್ಲೂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ತಾಯಿದ್ದಾರೆ..
ಇತ್ತೀಚೆಗೆ ಸಂದರ್ಶನದಲ್ಲಿ ಅವರಿಗೆ ಹೀಗೊಂದು ಪ್ರಶ್ನೆ ಎದುರಾಗಿತ್ತು… !! ‘ ಈ ಸಿನಿಮಾದಲ್ಲಿ ನೀವು ಬಿಕಿನಿ ಹಾಗೂ ಬಹುತೇಕ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದೀರಿ. ಇಂತಹ ಕಾಸ್ಟ್ಯೂಮ್ ಹಾಕಿ ಶೂಟ್ ಮಾಡುವಾಗ ಮುಜುಗರ ಅನಿಸಲಿಲ್ಲವಾ’ ಎನ್ನುವ ಪ್ರಶ್ನೆಗೆ ಪೂಜಾ ಉತ್ತರವೂ ಬೋಲ್ಡ್ ಆಗಿತ್ತು.. ‘ ಸಿನಿಮಾದ ಹೀರೋಗಳು ಟಿಶರ್ಟ್ ತೆಗೆದು ಆಬ್ಸ್ ತೋರಿಸುತ್ತಾರೆ. ಇಂತಹ ಸ್ವಾತಂತ್ರ್ಯವನ್ನು ನಮಗೂ ಏಕೆ ಕೊಡಬಾರದು. ನೀವು ಯಾಕೆ ಅದನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತೀರಿ’ ಎಂದು ಉತ್ತರಿಸಿದ್ದಾರೆ.
‘ ಯಾವ ದೃಶ್ಯದಲ್ಲಿ ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಎಂದು ನಾನು ಮತ್ತು ನಿರ್ದೇಶಕರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದೆವು. ಸೀರೆ ಹಾಕಿಕೊಂಡು ಫೈಟ್ ಮಾಡುವುದಕ್ಕೆ ಆಗುತ್ತಾ..??? ನಾನು ಯಾವ ರೀತಿಯ ಸಿನಿಮಾಗಳಲ್ಲಿ ನಟಿಸುತ್ತೇನೆ ಮತ್ತು ಎಂತಹ ಪಾತ್ರವನ್ನು ಮಾಡುತ್ತೇನೆ ಅದು ನನ್ನ ಆಯ್ಕೆ. ಸಮಾಜ ಏನೇ ಹೇಳಿದರೂ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉತ್ತರಿಸಿದ್ದಾರೆ..