ಮುಂಬೈ : ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತೆ ಬಾಲಿವುಡ್ ಮಂದಿ ಎಲ್ಲಿಗೇ ಹೋದರೂ ಒಂದಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಗರಿಗೆ ಆಹಾರವಾಗುತ್ತಲೇ ಇರುತ್ತಾರೆ. ಇದೀಗ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಟ್ರೋಲಿಗರ ಕೈಗೆ ಸಿಕ್ಕಿಕೊಂಡಿದ್ದಾರೆ.
ಮೀರಾ ಧರಿಸಿದ್ದ ಡ್ರೆಸ್ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.
ಹೌದು..! ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬರುವಾಗ ಮುಂಬೈ ಏರ್ ಪೋರ್ಟ್ ನಲ್ಲಿ ಮೀರಾ ಧರಿಸಿದ್ದ ಡ್ರೆಸ್ ಎಲ್ಲರ ಕಣ್ಣು ಕುಕ್ಕಿದೆ.
ಮೀರಾ ರಜಪೂತ್ ಶಾಟ್ರ್ಸ್ ಧರಿಸಿದ್ದು, ಶಾಟ್ರ್ಸ್ ತೀರಾ ಚಿಕ್ಕದಾಗಿದ್ರಿಂದ ಮೀರಾ ರಜಪೂತ್ ಟ್ರೋಲ್ ಆಗಿದ್ದಾರೆ. ಮೀರಾ ರಜಪೂತ್ ಪ್ಯಾಂಟ್ ಹಾಕಿದ್ರೆ ಚೆನ್ನಾಗಿರುತ್ತಿತ್ತು, ಪ್ಯಾಂಟ್ ಹಾಕೋದನ್ನ ಮೀರಾ ಮರೆತುಬಿಟ್ರಾ?, ಮೈ ಪೂರ್ತಿ ಬಟ್ಟೆ ಧರಿಸಿ.
ಮಗು ಮೈತುಂಬಾ ಬಟ್ಟೆ ಧರಿಸಿದೆ. ಆದರೆ ತಾಯಿನೇ ಪ್ಯಾಂಟ್ ಹಾಕಿಲ್ಲ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇನ್ನು ಮುಂಬೈ ಏರ್ ಪೋರ್ಟ್ನಲ್ಲಿ ಮೀರಾ ಕಾಣಿಸಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.