ಸ್ಯಾಂಡಲ್ ವುಡ್ ನಟ ಶರಣ್ ರಾಜ್ ಅವರು ಮೊದಲಿಗೆ ಕಾಮಿಡಿಯನ್ ಆಗಿ ಸಿನಿಮಾಗಳಲ್ಲಿ ಮಿಂಚುತ್ತಾ ಅಭಿಮಾನಿಗಳನ್ನ ರಂಜಿಸುತ್ತಾ ಬಂದಿದ್ದರು. ನಂತರ 100ನೇ ಸಿನಿಮಾ ರರ್ಯಾಂಬೋ ಮೂಲಕ ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಮಿಂಚಿದ ಶರಣ್ ಅವರು ಹೀರೋ ಆಗಿಯೂ ಅಭಿಮಾನಿಗಳ ಫೇವರೇಟ್ ಆದ್ರು. ಆ ನಂತರ ಅಧ್ಯಕ್ಷ, ರ್ಯಾಂಬೋ 2 , ಅಧ್ಯಕ್ಷ ಇನ್ ಅಮೆರಿಕಾ, ವಿಕ್ಟರಿ , ವಿಕ್ಟರಿ 2 , ರಾಜ್ ವಿಷ್ಣು ಹೀಗೆ ಬ್ಯಾಟು ಬ್ಯಾಕ್ ಸಿನಿಮಾಗಳಲ್ಲಿ ನಟನಾಗಿ ಯಶಸ್ಸು ಕಂಡ ಶರಣ್ ಅವರು ಇದೀಗ ತಮ್ಮದೇ ಸ್ವಂತ ಯೂಟ್ಯೂಬ್ ಚಾನಲ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಹೊರಟಿದ್ದಾರೆ.
ಹೌದು ಸಾಮಾ್ಯವಾಗಿ ನಟ ನಟಿಯರು ಇನ್ಸ್ಟಾ, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಖಾತೆಗಳನ್ನ ತೆರೆದು ಆಗಾಗ ಪೋಸ್ಟ್ ಗಳನ್ನ ಮಾಡುತ್ತಾ ಜನರಿಗೆ ಹತ್ತಿರವಾಗಿರುತ್ತಾರೆ. ಅಂತೆಯೇ ಕೆಲವರು ಯೂಟ್ಯೂಬ್ ನಲ್ಲೂ ತಮ್ಮದೇ ಸ್ವಂತ ಚಾನಲ್ ಗಳನ್ನ ತೆರೆದಿದ್ದಾರೆ. ಇದೀಗ ನಟ ಶರಣ್ ಕೂಡ ತಮ್ಮ ಯೂಟ್ಯೂಬ್ ಚಾನಲ್ ತೆರೆದಿದ್ದು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇದರ ಬಗ್ಗೆ ಇತ್ತೀಚೆಗಷ್ಟೆ ವೀಡಿಯೋ ಒಂದನ್ನು ಮಾಡಿ ಮಾಹಿತಿ ಹಂಚಿಕೊಂಡ ಶರಣ್, ನಾನು ನನ್ನದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸುತ್ತಿದ್ದೇನೆ. ಇದರ ಹಿಂದೆ ದೊಡ್ಡ ಉದ್ದೇಶ ಏನಿಲ್ಲ. ನನ್ನ ಜೀವನದ ಆಗುಹೋಗುಗಳು, ನನ್ನ ನಟನೆಯ ಸಿನಿಮಾ ಮಾಹಿತಿಗಳು ಹಾಗೂ ನನ್ನ ಹವ್ಯಾಸಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಹೀಗಾಗಿ ಇವೆಲ್ಲವನ್ನು ಹಂಚಿಕೊಳ್ಳಲು ನನಗೆ ಇದೆ ಸರಿಯಾದ ಮಾರ್ಗ ಎನ್ನಿಸಿತು. ಕೆಲವು ಆಪ್ತರಿಂದ ಒಂದಷ್ಟು ಮಾರ್ಗದರ್ಶನವನ್ನು ಪಡೆದು ಚಾನೆಲ್ ಆರಂಭಿಸುವ ಬಗ್ಗೆ ಚಿಂತಿಸಿದ್ದೇನೆ ಎಂದಿದ್ದರು.
ಆಕ್ಟರ್ ಶರಣ್ ಯೂಟ್ಯೂಬ್ ಚಾನೆಲ್ನಲ್ಲಿ ಮೊದಲ ವೀಡಿಯೋ ಇಂದು ಹಾಕಲಾಗಿದ್ದು, ಸಂಸ್ಕೃತ ಭಾಷೆಯ ವೇದಾಂತ ದೇಸಿಕ ಚಿತ್ರದ ರಘುವೀರ ಗಧ್ಯಂ ಹಾಡನ್ನು ಹಾಡಿದ್ದಾರೆ. ಈಗಾಗಲೇ ಸಾಕಷ್ಟು ಹಾಡುಗಳನ್ನ ಹಾಡಿರುವ ನಟ ಶರಣ್ ಯೂಟ್ಯೂಬ್ನಲ್ಲೂ ಸಾಕಷ್ಟು ಹಾಡುಗಳನ್ನ ಹಾಡಿದ್ದಾರೆ. ಇನ್ನೂ ಶರಣ್ ಅವರ ಈ ಯೂಟ್ಯೂಬ್ ಚಾನೆಲ್ ಆರಂಭವಾಗಿ ಒಂದೇ ದಿನವಾಗಿದೆ ಅಷ್ಟೇ. ಆದ್ರೆ ಈಗಾಗಲೇ ಸಾಕಷ್ಟು ಮಂದಿ ಸಬ್ಸ್ಕ್ರೈಬ್ ಮಾಡಿಕೊಂಡಿದ್ದಾರೆ.