ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿ ನಂತರ ಬಣ್ಣದ ಜಗತ್ತಿನಿಂದ ಮಾಯವಾಗಿದ್ದ ನಟಿ ಪ್ರೇಮಾ ನಂತರ “ಉಪೇಂದ್ರ ಮತ್ತೆ ಹುಟ್ಟಿ ಬಾ” ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ರು. ಅದಾದ ನಂತರದಲ್ಲಿ ಮತ್ತೆ 3 ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಬಣ್ಣ ಹಚ್ಚಲು ಸಜ್ಜಾಗ್ತಿದ್ದಾರೆ. ಹೌದು ಬಹುತೇಕ ಹೊಸಬರೇ ಇರುವ ಸಿನಿಮಾ ‘ವೆಡ್ಡಿಂಗ್ ಗಿಫ್ಟ್’ ಮೂಲಕ ಪ್ರೇಮ ಮತ್ತೆ ತೆರೆ ಮೇಲೆ ಬರಲು ಸಜ್ಜಾಗ್ತಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರೇಮ, ನಾನು ಕ್ಯಾರೆಕ್ಟರ್ ಗಳನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ತುಂಬ ಚ್ಯೂಸಿ. ಇಲ್ಲಿವರೆಗೂ ಹಲವು ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಹಾಗಾಗಿ ನಾನು ಒಪ್ಪಿಕೊಳ್ಳುವ ಪಾತ್ರಗಳು ಮತ್ತು ಸಿನಿಮಾದ ವಿಷಯ ನನಗೆ ಅರ್ಥವಾಗಬೇಕು.
ಇತ್ತೀಚೆಗೆ ಹಲವು ಸಿನಿಮಾಗಳ ಕಥೆಗಳನ್ನು ಕೇಳಿದೆ ಆದರೆ ಯಾವುದೂ ನನಗೆ ಇಷ್ಟವಾಗಿರಲಿಲ್ಲ. ಅದು ಅಲ್ಲದೇ ನನ್ನ ತಂದೆಯ ಆರೋಗ್ಯ ಸಹ ಸರಿಯಿರಲಿಲ್ಲ. ಅದಕ್ಕೆ ಸಿನಿಮಾ ಬಗ್ಗೆ ಹೆಚ್ಚು ಗಮನಕೊಂಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಲ್ಲಿನ ವಿಷಯ ಮತ್ತು ನನ್ನ ಪಾತ್ರ ನನಗೆ ಇಷ್ಟವಾಗಿದೆ. ಅದಕ್ಕೆ ನಾನು ಸಿನಿಮಾ ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸಿನಿಮಾದ ಮೇಲೆ ನಿರ್ದೇಶಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಹೊಸಬರೇ ಇರುವ ಸಿನಿಮಾ ಆಗಿರೋದ್ರಿಂದ ನಾನು ಹೊಸದೇನಾದರೂ ಕಲಿಯಬಹುದು . ಇವತ್ತಿನ ಪೀಳಿಗೆ ಬಗ್ಗೆ ಈ ಸ್ಟೋರಿ ಇದೆ. ಇದರಲ್ಲಿ ನಾನು ಅಡ್ವೋಕೇಟ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದೇ ನವಂಬರ್ ನಲ್ಲಿ ನನ್ನ ಪಾತ್ರದ ಶೂಟಿಂಗ್ ಪ್ರಾರಂಭವಾಗುತ್ತೆ. ಈ ಯಂಗ್ ಆ್ಯಂಡ್ ಎನರ್ಜಿಟಿಕ್ ಟೀಮ್ ಸಿಕ್ಕಿರುವುದರಿಂದ ನನಗೂ ಖುಷಿ ಇದೆ ಎಂದು ಹೇಳಿದ್ದಾರೆ. ಅಂದ್ಹಾಗೆ ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ಸೋನು ಗೌಡ ಮತ್ತು ನಿಶಾನ್ ನಾಣಯ್ಯ ಪ್ರಮುಖ ಪಾತ್ರದಲ್ಲಿ ಕಾನಿಸಿಕೊಳ್ಳುತ್ತಿದ್ದು, ವಿಕ್ರಂ ಪ್ರಭು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಕ್ರಂ ಪ್ರಭು ಫಿಲಂಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ.