ಪುನೀತ್ ರಾಜ್ ಕುಮಾರ್ ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿತ್ತು ಆದರೂ ಲೆಕ್ಕಿಸದೆ ಇಂದು ಬೆಳಿಗ್ಗೆ ಜಿಮ್ ಗೆ ಹೊಗಿದ್ದೇ ತಪ್ಪಯ್ತಾ ಎನ್ನುವ ಪ್ರಶ್ನೆ ಈಗ ಕಾಡ್ತಿದೆ. ಸಾಮಾನ್ಯವಾಗಿ ಪುನಿತ್ ನಿಯಮಿತವಾಗಿ ವ್ಯಾಯಾಮ ಸೈಕಲ್ ತುಳಿಯುವುದು ಓಡುವುದು ಎಲ್ಲವನ್ನು ಮಾಡುತ್ತಿದ್ದರೂ ಆದರೂ ಅವರಿಗೆ ಹೃದಯಾಘಾತ ಆಗಿರುವುದು ಅಂತ್ಯಂತ ನೋವಿನ ಸಂಗತಿ..
ಪುನೀತ್ ಅವರು ಸಮರಕಲೆಗಳನ್ನು ಕಲಿತವರು. ಇದರಿಂದಾಗಿ ಅವರ ಆರೋಗ್ಯ, ಮೈಕಟ್ಟು ಅತ್ಯುತ್ತಮವಾಗಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದರು. ಇದರ ಗುಟ್ಟು ಅವರು ನಿತ್ಯ ಅನುಸರಿಸುತ್ತಿದ್ದ ವ್ಯಾಯಾಮಶೈಲಿಯೇ ಕಾರಣವಾಗಿತ್ತು. ಇವರು ವ್ಯಾಯಾಮ ಮಾಡುತ್ತಿರುವ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.