ಆರ್ ಆರ್ ಆರ್ ಚಿತ್ರದ ದೃಶ್ಯ ವೈಭವವನ್ನು ಕಣ್ಣು ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎಸ್. ಎಸ್. ರಾಜ ಮೌಳಿ ನಿರ್ದೇಶನದ ಈ ಚಿತ್ರ ಈಗಾಗಲೇ ಸಿನಿ ಪ್ರೀಯರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದೆ. ಆರ್ ಆರ್ ಆರ್ ಚಿತ್ರ ತಂಡ ೪೫ ಸೆಕೆಂಡುಗಳ ವಿಡಿಯೊ ತುಣುಕೊಂದನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲೂ ಸಕತ್ ಸದ್ದು ಕೂಡ ಮಾಡುತ್ತಿದೆ.
ಜ್ಯೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ನಾಯಕನ ನಟರಾಗಿ ಅಭಿನಯಿಸಿರುವ ಈ ಚಿತ್ರದ ಬಜೆಟ್ ೪೦೦ ಕೋಟಿ ರೂಪಾಯಿ. ಡಿವಿವಿ ಎಂಟರ್ ಟೈನ್ ಮೆಂಟ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡಿದೆ. ೨೦೨೨ರ ಜನವರಿ ೭ರಂದು ಥಿಯೇಟರ್ ಗೆ ಲಗ್ಗೆ ಇಡಲಿದೆ.
ಸ್ವಾತಂತ್ರö್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಅವರ ಜೀವನ ಆಧಾರಿತವಾಗಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಅಲ್ಲೂರಿ ಸೀತರಾಮ ರಾಜ್ ಪಾತ್ರದಲ್ಲಿ ಜ್ಯೂನಿಯರ್ ಎನ್ ಟಿಆರ್ ಮತ್ತು ಕೋಮರಂ ಭೀಮ್ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ. ಇನ್ನುಳಿದಂತೆ ಬಾಲಿವುಡ್ ನಟ ಅಜೇಯ್ ದೇವಗನ್ ಮತ್ತು ನಟಿ ಆಲಿಯಾ ಭಟ್ ಈ ಅದ್ದೂರಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಬಾಹುಬಲಿ ಚಿತ್ರದ ಯಶಸ್ವಿ ನಂತರ ರಾಜಮೌಳಿ ಮತ್ತೊಂದು ದೊಡ್ಡ ಬಜೆಟ್ ಹಾಗೂ ಅದ್ದೂರಿ ಚಿತ್ರವನ್ನು ನಿದೇರ್ಶನ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸೂಪರ್ ಸ್ಟಾರ್ ನಟರು ಹಾಗೂ ಸೂಪರ್ ಸ್ಟಾರ್ ನಿದೇರ್ಶಕನ ಆರ್ ಆರ್ ಆರ್ ಚಿತ್ರ ಹೊಸ ವರ್ಷ ಹಾಗೂ ಸಂಕ್ರಾತಿ ಹಬ್ಬಕ್ಕೆ ಸಿನಿ ಪ್ರೀಯರ ಮನವನ್ನು ತಣಿಸಲಿದೆ.