ಚೆನ್ನೈ: ನಟಿ ಸಮಂತಾ ರುತ್ ಪ್ರಭು ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿದ್ದ ನಾಗಚೈತನ್ಯ ಜೊತೆಗಿನ ನೂರಕ್ಕೂ ಹೆಚ್ಚು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ದಕ್ಷಿಣ ಭಾರತದ ಸ್ಟಾರ್ ಕಪಲ್ ಎಂದೇ ಗುರುತಿಸಿಕೊಂಡಿದ್ದ ಚೇತು – ಸ್ಯಾಮ್ ಅಕ್ಟೋಬರ್ ಎರಡರಂದು ವಿಚ್ಛೇದನ ಪಡೆದುಕೊಂಡಿದ್ದರು.
ಇದಾದ ಬಳಿಕ ಸಮಂತಾ ನಾಗಚೈತನ್ಯ ಅವರೊಂದಿಗೆ ತೆಗೆಸಿಕೊಂಡಿದ್ದ, ಫೋಟೋಗಳನ್ನು ಮಧುರವಾದ ಕ್ಷಣಗಳನ್ನು ಡಿಲೀಟ್ ಮಾಡಿದ್ದರು.
ಇದೀಗ ತಮ್ಮ ಮದುವೆಯ ಫೋಟೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಆದ್ರೆ ಸ್ನೇಹಿತರು, ಕುಟುಂಬದವರ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿಲ್ಲ.