ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಎಂಟ್ರಿಕೊಟ್ಟು ಸಕ್ಸಸ್ ಕಂಡಿರುವ ನಟಿ ದೀಪಿಕಾ ಪಡುಕೋಣೆ. ಹೌದು, ದೀಪಿಕಾ ಪಡುಕೋಣೆ ಅವರು ಬಾಲಿವುಡ್ ಪಯಣಕ್ಕೆ ಈಗ 14ರ ಸಂಭ್ರಮ. ಈ ಖುಷಿಯನ್ನು ದೀಪಿಕಾ ಪಡುಕೋಣೆ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೇ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ಗೆ ಮುನ್ನ ಸ್ಯಾಂಡಲ್ ವುಡ್ ನಲ್ಲಿ ನಟಿಸಿದ್ದರು. ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ದೀಪಿಕಾ ಮತ್ತೆ ಮಿಂಚು ಹರಿಸಿದ್ದು ಬಾಲಿವುಡ್ ಅಂಗಳದಲ್ಲಿ.
ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟ ದೀಪಿಕಾ ಪಡುಕೋಣೆ ನಂತರ ಹಿಂತಿರುಗಿ ನೋಡಲೇ ಇಲ್ಲ. ಶಾರೂಕ್ ಖಾನ್ ಜೊತೆ ನಟಿಸಿರುವ ಓಂ ಶಾಂತಿ ಓಂ ಸೂಪರ್ ಹಿಟ್ ಆಗಿತ್ತು. ಆ ನಂತರ ದೀಪಿಕಾ ಅವರು ಬಾಲಿವುಡ್ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದರಂತೆ ಅವಕಾಶಗಳನ್ನು ಗಿಟ್ಸಿಸಿಕೊಂಡ್ರು.
ಇನ್ನೊಂದೆಡೆ ದೀಪಿಕಾ ಅವರು ಗಾಸಿಪ್, ವಿವಾದಗಳಿಂದಲೂ ಸುದ್ದಿಯಾಗಿದ್ದರು. ಆದ್ರೆ ಅದನ್ನೆಲ್ಲಾ ಮೆಟ್ಟಿ ನಿಂತ ದೀಪಿಕಾ ಪಡುಕೋಣೆ ಈಗ ಚಿತ್ರದ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಸದ್ಯ ದೀಪಿಕಾ ಪಡುಕೋಣೆ ಅವರು ಶಾರೂಕ್ ಖಾನ್ ಅಭಿನಯದ ಪಠಾಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಒಟ್ಟಿನಲ್ಲಿ ದೀಪಿಕಾ ಪಡುಕೋಣೆ ಅವರ ಸಿನಿ ಜರ್ನಿಗೆ 15ನೇ ವರ್ಷ. ಆದ್ರೆ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಆದ್ರೆ ಸಿನಿ ಪಯಾಣಕ್ಕೆ ದಾರಿ ಮಾಡಿಕೊಟ್ಟ ಸ್ಯಾಂಡಲ್ ವುಡ್ ಅನ್ನು ಮಾತ್ರ ಮರೆತಂತೆ ಇದೆ.