ನಿರ್ದೇಶಕ ಸಿಂಪಲ್ ಸುನಿ ಈಗ ಸಕತ್ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ಮುಂದಾಗಿದ್ದಾರೆ. ಅಂದ ಹಾಗೇ ಸಿಂಪಲ್ ಸುನಿ ಅವರು ಈಗ ಸಕತ್ ಬಿಝಿಯಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಸಿಂಪಲ್ ಸುನಿ ನಿರ್ದೇಶನದ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಕತ್ ಚಿತ್ರದಲ್ಲಿ ಚಿತ್ರದಲ್ಲಿ ನಟಿಸಿದ್ರೆ, ಅವತಾರ ಪುರುಷ ಚಿತ್ರದಲ್ಲಿ ಶರಣ್ ಅಭಿನಯಿಸಿದ್ದಾರೆ. ಎರಡು ಚಿತ್ರಗಳ ಪ್ರಮೋಷನ್ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ. ಅಂದ ಹಾಗೇ ಸಕತ್ ಚಿತ್ರ ನವೆಂಬರ್ 26ಕ್ಕೆ ಬಿಡುಗಡೆಯಾಗಲಿದೆ. ನವೆಂಬರ್ 14ಕ್ಕೆ ಚಿತ್ರದ ಟೈಟಲ್ ರಿಲೀಸ್ ಆಗಲಿದೆ. ಚಮಕ್ ಚಿತ್ರದ ನಂತರ ಗಣೇಶ್, ಸಿಂಪಲ್ ಸುನಿ ಮತ್ತು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಾಂಬಿನೇಷನ್ ನಲ್ಲಿ ಸಕತ್ ಚಿತ್ರ ಮೂಡಿ ಬಂದಿದೆ. ಸಿಂಪಲ್ ಸುನಿ ಚಿತ್ರದಲ್ಲಿ ಮನರಂಜನೆಗೆ ಯಾವುದೇ ರೀತಿಯ ಕೊರತೆಗಳು ಇರುವುದಿಲ್ಲ. ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಿಂಪಲ್ ಸುನಿ ಅವರು ಚಿತ್ರದ ಪ್ರೊಮೊಷನ್ ಗಳನ್ನು ಕೂಡ ಡಿಫರೆಂಟ್ ಸ್ಟೈಲ್ ನಲ್ಲಿ ಮಾಡುತ್ತಾರೆ. ಸಕತ್ ಚಿತ್ರದಲ್ಲಿ ಕೋರ್ಟ್ ಕಟಕಟೆಯ ದೃಶ್ಯಗಳಿವೆ. ಹಾಗಾಗಿ ಚಿತ್ರದ ಪ್ರೊಮೋಷನ್ ಗಳಿಗೂ ಕೋರ್ಟ್ ಕಟಕಟೆಯ ದೃಶ್ಯವನ್ನೇ ಮರು ಸೃಷ್ಟಿ ಮಾಡಿಕೊಂಡಿದ್ದಾರೆ. ಸಿನಿ ಮಾಲ್ ಗಳಲ್ಲೂ ಕೋರ್ಟ್ ಕಟಕಟೆಗಳನ್ನು ನಿರ್ಮಾಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಸಕತ್ ಚಿತ್ರವನ್ನು ನೋಡುವುದಕ್ಕೆ ಮುನ್ನ ಅಥವಾ ನೋಡಿದ ನಂತರ ಈ ಕಟಕಟೆಯಲ್ಲಿ ಸಿನಿ ಪ್ರಿಯರು ಫೋಟೋ ತೆಗೆದುಕೊಳ್ಳಬಹುದು. ಒಟ್ಡಾರೆ, ಸಿಂಪಲ್ ಸುನಿ ಅವರು ಸಕತ್ ಚಿತ್ರಕ್ಕೆ ಕ್ರಿಯೇಟಿವ್ ಆಗಿಯೇ ಪ್ರಚಾರ ಮಾಡುತ್ತಿದ್ದಾರೆ.