ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಸ್ಕ್ರೀನ್ ಶೇರ್ ಮಾಡಬೇಕು ಎನ್ನವುದು ಸ್ಯಾಂಡಲ್ ಹುಡ್ ನ ನಾಯಕೀಯರ ಬಹುದೊಡ್ದ ಕನಸಾಗಿರುತ್ತೆ. ಇದೀಗ ಅಪ್ಪು ನಿಧನರಾದ ನಂತರ ಅವರ ಜೊತೆ ತೆರೆ ಹಂಚಿಕೊಳ್ಳ ಬೇಕು ಎನ್ನುವ ಕಲಾವಿದರ ಕನಸು ಕನಸಾಗಿಯೇ ಉಳಿದಿದೆ. ಪ್ರಸ್ತುತ ಸ್ಯಾಂಡಲ್ ಹುಡ್ ನ ಪ್ರಮುಖ ಬೇಡಿಕೆಯ ನಟಿ ಅಶಿಕ ರಂಗನಾಥ್ ಕೂಡ ಈ ಕನಸನಿಂದ ಹೊರತಾಗಿಲ್ಲ. ಪುನೀತ್ ರಾಜ್ ಕುಮಾರ್ ಜೊತೆ ದ್ವಿತ್ವ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುವ ಕಾತರದಲ್ಲಿ ಅಶಿಕಾ ರಂಗನಾಥ್ ಇದ್ದರು. ಆದರೆ ಈ ಆಕಸ್ಮಿಕ ಘಟನೆ ಅವರ ಕನಸ್ಸನ್ನ ನುಚ್ಚು ನೂರು ಮಾಡಿದೆ. ಪುನೀತ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ದ್ವಿತ್ವ ಸಿನಿಮಾದಲ್ಲಿ ಸಿಕ್ಕಿತ್ತು. ಜೊತೆಯಾಗಿ ನಟಿಸೋಕೆ ಎಲ್ಲಾ ಸಿದ್ಧತೆಗಳು ನಡೆದಿತ್ತು ಆದರೆ ಪುನೀತ್ ಜೊತೆ ನಟಿಸುವ ಕನಸು ಕನಸಾಗಿಯೇ ಉಳಿದಿದೆ. ಎಂದು ಪುನೀತ್ ಅವರ ನೆನಪುಗಳನ್ನ ಹಂಚಿಕೊಂಡರು. ಮದಗಜ ಸಿನಿಮಾದ ಸುದ್ಧಿಗೋಷ್ಟಿ ನಂತರ ಅಶಿಕ ರಂಗನಾಥ್ ಮಾಧ್ಯಮಗಳ ಜೊತೆ ಮಾತನಾಡಿ ಈ ವಿಚಾರಗಳನ್ನ ಹಂಚಿಕೊಂಡರು.