ಬಾಲಿವುಡ್ ನಲ್ಲಿ ರಿಲೀಸ್ ಆಗಿ ವಾರ ಕಳೆಯೋದ್ರೊಳಗೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ , ಕೋಟಿ ಕೋಟಿ ಬಾಚುತ್ತಿರುವ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ್ದು, ಸಿನಿಮಾತಂಡ ಸಕ್ಸಸ್ ನ ಸಂತೋಷದಲ್ಲಿದೆ..
ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಸೂರ್ಯವಂಶಿಗೆ ಜನ ಬಹುಪರಾಕ್ ಹೇಳ್ತಿದ್ದಾರೆ… ಥಿಯೇಟರ್ ಗಳು ಹೌಸ್ ಫುಲ್ ಆಗಿವೆ.. ರಾತ್ರಿಯಡೀ ಮುಂಬೈನ ಥಿಯೇಟರ್ ಗಳಲ್ಲಿ ಶೋ ಪ್ರಸಾರವಾಗುಷ್ಟರ ಮಟ್ಟಿಗೆ ಜನ ಹುಚ್ಚಿದ್ದು ಸಿನಿಮಾ ವೀಕ್ಷಣೆ ಮಾಡ್ತಾಯಿದ್ದಾರೆ.
ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಅಂದರೆ, ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಜೊತೆ ವಿಶೇಷ ಪಾತ್ರದಲ್ಲಿ ಅಜಯ್ ದೇವಗನ್ ಹಾಗೂ ರಣ್ವೀರ್ ಸಿಂಗ್ ಕೂಡ ನಟಿಸಿದ್ದಾರೆ.
ರಿಲಯನ್ಸ್ ಎಂಟರ್ಟೈನ್ಮೆಂಟ್ ಹಾಗೂ ನಿರ್ಮಾಪಕ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಸೂರ್ಯವಂಶಿ ಸಿನಿಮಾಗೆ ದಿಲ್ ದಾರ್ ಆಗಿ ಬಂಡವಾಳ ಹೂಡಿದೆ..
ಸಿನಿಮಾ ಕೇವಲ ಐದು ದಿನಗಳಲ್ಲೇ ನೂರು ಕ್ಲಬ್ ಸೇರಿದೆ. ಈ ಖುಷಿಯಲ್ಲಿ ಸೂರ್ಯವಂಶಿ ಸಿನಿಮಾವನ್ನ ಓಟಟಿಗೆ ಸೇಲ್ ಮಾಡಲು ಸಿನಿಮಾ ತಂಡ ನಿರ್ಧಾರ ಮಾಡಿದೆ ಎಂಬ ಸುದ್ದಿ ಭಾರೀ ವೈರಲ್ ಆಗ್ತಿದೆ.
ಅಷ್ಟೇ ಅಲ್ಲ ಭಾರೀ ಮೊತ್ತಕ್ಕೆ ಸಿನಿಮಾ ಸೇಲ್ ಆಗ್ತಿದೆ ಎನ್ನಲಾಗಿದೆ.. ಬರೋಬ್ಬರಿ 65 – 70 ಕೋಟಿಗೆ ನೆಟ್ ಫ್ಲಿಕ್ಸ್ ಗೆ ಸೇಲ್ ಮಾಡುವ ಒಪ್ಪಂದವಾಗಿದೆ ಎನ್ನಲಾಗ್ತಿದೆ.