ಸಲಗ ಸಕ್ಸಸ್ ಸಂತೋಷದಲ್ಲಿರುವ ಸ್ಟಾರ್ ನಟ ದುನಿಯಾ ವಿಜಯ್ ಅವರು ಇದೀಗ ತೆಲುಗಿನ ಸಿನಿಮಾದಲ್ಲೂ ಮಿಂಚಲಿದ್ದಾರೆ ಅನ್ನೋ ಸುದ್ದಿ ಸಖತ್ ಸೌಂಡ್ ಮಾಡ್ತಿದೆ… ಹೌದು… ತೆಲುಗಿನ ಸ್ಟಾರ್ ನಟ ನಂದಮುರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ದುನಿಯಾ ವಿಜಿ ನಟಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾಗೆ ತಾತ್ಕಾಲಿಕವಾಗಿ ಎನ್ ಬಿಕೆ 107 ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಕೂಡ ಹೇಳಲಾಗಿತ್ತು.
ಈಗ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ದಿನಾಂಕ ಫಿಕ್ಸ್ ಆಗಿದೆ.. ನವೆಂಬರ್ 13ರಂದು ಸಿನಿಮಾದ ಮುಹೂರ್ತ ನೆರವೇರಲಿದೆ. ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಅಧಿಕೃತಗೊಳಿಸಿದೆ. ಇನ್ನೂ ಈ ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ಅಭಿನಯಿಸುತ್ತಾರೆ ಎನ್ನುವ ವಿಚಾರವನ್ನು ಚಿತ್ರತಂಡ ಅಧಿಕೃತಗೊಳಿಸಿಲ್ಲ.. ಆದ್ರೆ ಮುಹೂರ್ತ ಸಮಾರಂಭದ ವೇಳೆಯೇ ದುನಿಯಾ ವಿಜಯ್ ಪಾತ್ರದ ಬಗ್ಗೆ ಚಿತ್ರ ತಂಡ ಅಧಿಕೃತ ಮಾಹಿತಿ ನೀಡಲಿದೆ ಎಂದು ಹೇಳಲಾಗ್ತಿದೆ.
ಪ್ರಸ್ತುತ ದುನಿಯಾ ವಿಜಯ್ ಸಲಗ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಮೊದಲ ಬಾರಿಗೆ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದ ವಿಜಿಗೆ ನಿರ್ದೇಶಕರಾಗಿಯೂ ಯಶಸ್ಸು ಸಿಕ್ಕಿದೆ. ಸಲಗ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ. ಆದ್ರೆ ಈ ಸಿನಿಮಾದಲ್ಲಿ ವಿಜಿ ಖಳನಾಯಕನಾಗಬಹುದು ಎಂಬ ಮಾತುಗಳಿದ್ದು, ಖಳನಾಯಕ ಆಗಿದ್ದೇ ಆದ್ರೆ ಇದು ಕೂಡ ಅವರ ಹೊಸ ಪ್ರಯೋಗವಾಗಿರಲಿದೆ…