ಲಾಕ್ ಡೌನ್ , ಕೋವಿಡ್ ಹಾವಳಿ ಅಂತ ಎರೆಡು ವರ್ಷಗಳಿಂದ ಹೊಡೆತ ತಿಂದಿದ್ದ ಸಿನಿಮಾರಂಗ ನಿಧಾನವಾಗಿ ಚೇತರಿಸಿಕೊಳ್ತಿದೆ. 100 % ಸೀಟಿಂಗ್ ಗೂ ಅವಕಾಶ ನೀಡಿರೋದು ಸಿನಿಪ್ರಯರ ಖುಷಿ ಹೆಚ್ಚಿಸಿದೆ.. ಈ ನಡುವೆ ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳು ಕೂಡ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಜನರ ಮೆಚ್ಚುಗೆ ಪಡೆಯುತ್ತಿದೆ.
ಭರ್ಜರಿ ಓಪನಿಂಗ್ ಆರಂಭಿಸಿದ ಸಲಗ , ಕೋಟಿಗೊಬ್ಬ 3 , ಭಜರಂಗಿ , ನಡುವೆ ಇನ್ನಿತರೇ ಸ್ಟಾರ್ ಗಳ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ರೆ , ಹೊಸಬರ ಸಿನಿಮಾಗಳು ಕೂಡ ಅಷ್ಟೇ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ. ಈ ನಡುವೆ ಇನ್ನೂ ದೊಡ್ಡ ದೊಡ್ಡ ಸ್ಟಾರ್ ಗಳ ಬಹುನಿರೀಕ್ಷಿತ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳು ರಿಲೀಸ್ ಗೆ ಕ್ಯೂ ನಿಂತಿದೆ.. ಅದ್ರಲ್ಲೂ ಈ ವಾರವನ್ನ ಧಮಾಕಾ ವಾರ , ಸಿನಿಪ್ರಿಯರಿಗೆ ಜಾತ್ರೆ ಅಂದ್ರೆ ತಪ್ಪಾಗೋದಿಲ್ಲ. ಈ ವಾರ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಲಿವೆ..
ಹೌದು ಒಟ್ಟಾರೆ 6 ಕನ್ನಡ ಸಿನಿಮಾಗಳು ಒಂದೇ ವಾರದಲ್ಲಿ ರಿಲೀಸ್ ಆಗಲಿದೆ.. ನಾಳೆ ಅಂದ್ರೆ ಶುಕ್ರವಾರ ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ ಒಟ್ಟಾರೆ 6 ಸಿನಿಮಾಗಳು ರಿಲೀಸ್ ಆಗಲಿವೆ..
ಆ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ..
“ಪ್ರೇಮಂ ಪೂಜ್ಯಂ” : ನೆನಪಿರಲಿ ಪ್ರೇಮ್ ನಟನೆಯ 25 ನೇ ಸಿನಿಮಾವಿದು…
ಹಿಟ್ಲರ್
ಟಾಮ್ ಅಂಡ್ ಜೆರ್ರಿ
ಬೈ1 ಗೆಟ್ 1 ಫ್ರೀ
ಕಪೋ ಕಲ್ಪಿತಂ
ಯರ್ರಾಬಿರ್ರಿ