ನವೆಂಬರ್ 2ರಂದು ವಿಶ್ವಾದ್ಯಂತ ಒಟಿಟಿಯಲ್ಲಿ ರಿಲೀಸ್ ಆದ ಸೂರ್ಯ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಜೈ ಭೀಮ್ ಸೂಪರ್ ಹಿಟ್ ಆಗ್ತಿದೆ.. ಸಿನಿಮಾಗೆ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.. ಜನರ ಮೈ ನವಿರೇಳಿಸುವಂತೆ ಸತ್ಯಕಥೆಯನ್ನ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ..
ಇದರ ಬೆನ್ನಲ್ಲೆ ಜೈ ಭೀಮ್ ಚಿತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. IMBDಯಲ್ಲಿ ಎಲ್ಲಾ ಸಿನಿಮಾಗಳನ್ನು ಹಿಂದಕ್ಕೆ ಹಾಕಿ ಅಗ್ರ ಸ್ಥಾನಕ್ಕೆ ಜೈ ಭೀಮ್ ತಲುಪಿದೆ. ಈ ಸಿನಿಮಾದ ನೈಜತೆ ಸಿಜಕ್ಕೂ ಎಲ್ಲರನ್ನ ಹುರಿದುಂಬಿಸುವ ಜೊತೆಗೆ ಅವರ ಜೊತೆಗೆ ಮಾನಸಿಕವಾಗಿಯೂ ಕನೆಕ್ಟ್ ಆಗಿದೆ..
ಜೈ ಭೀಮ್ ಸಿನಿಮಾ 1993ರಲ್ಲಿ ನಡೆದ ನೈಜ ಕಥೆ ಆಧಾರಿತ ಸಿನಿಮಾವಾಗಿದೆ.. ನ್ಯಾಯಮೂರ್ತಿ ಕೆ.ಚಂದ್ರು ಅವರು ಹೋರಾಡಿದ ಪ್ರಕರಣವನ್ನು ಈ ಸಿನಿಮಾ ಒಳಗೊಂಡಿದೆ.
ತಮಿಳುನಾಡಿನ ಇರುಲರ್ ಬುಡಕಟ್ಟಿನ ಸೆಂಗೇಣಿ ಮತ್ತು ರಾಜಾಕಣ್ಣು ದಂಪತಿಗಳಿಗೆ ನ್ಯಾಯಮೂರ್ತಿ ಚಂದ್ರು ಅವರು ಹೇಗೆ ನ್ಯಾಯ ಕೊಡಿಸಿದ್ರು ಎನ್ನುವುದನ್ನ ಇಲ್ಲಿ ತೋರಿಸಲಾಗಿದೆ..
ಸೆಂಗೇಣಿ ಮತ್ತು ರಾಜಾಕಣ್ಣು ದಂಪತಿಗಳು ಇಲಿಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ವಿಷಕಾರಿ ಹಾವುಗಳನ್ನು ಹಿಡಿಯಲು ಮೇಲ್ಜಾತಿ ಪುರುಷರ ಹೊಲಗಳಲ್ಲಿ ಕೆಲಸ ಮಾಡುತ್ತಾರೆ.
ಸೆಂಗೇಣಿ ಪತಿ ರಾಜಾಕಣ್ಣುವನ್ನು ಒಂದು ಪ್ರಕರಣದಲ್ಲಿ ಪೋಲೀಸರು ಬಂಧಿಸುತ್ತಾರೆ. ನಂತರ ಆತ ಠಾಣೆಯಿಂದ ನಾಪತ್ತೆ ಆಗುತ್ತಾನೆ. ಈ ಸಂದರ್ಭದಲ್ಲಿ ತನ್ನ ಪತಿಗೆ ನ್ಯಾಯ ಕೇಳಿ ವಕೀಲ ಚಂದ್ರುವಿನ ಸಹಾಯ ಪಡೆಯುತ್ತಾಳೆ. ಇಲ್ಲಿಂದಲೇ ಸಿನಿಮಾದ ಅಸಲಿ ಕಥೆ ಪ್ರಾರಂಭವಾಗುತ್ತೆ..
ಈ ಚಿತ್ರಕ್ಕೆ ಈಗ ಐಎಂಡಿಬಿಯಲ್ಲಿ ಅಗ್ರಸ್ಥಾನ ಸಿಕ್ಕಿದೆ.. ಐಎಂಡಿಬಿಯಲ್ಲಿ 9.6 ರೇಟಿಂಗ್ ಅನ್ನು ಜೈಭೀಮ್ ಪಡೆದುಕೊಂಡಿದ್ದು, ಮೊದಲ ಸ್ಥಾನದಲ್ಲಿದ್ದ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನಡೆದಿದೆ. ಜೈ ಭೀಮ್ ಸಿನಿಮಾದ ನಂತರ ಎರಡನೇ ಸ್ಥಾನದಲ್ಲಿ 9.3 ರೇಟಿಂಗ್ ಪಡೆದ ಹಾಲಿವುಡ್ನ ‘ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್’ ಇದ್ದು, ಮೂರನೇ ಸ್ಥಾನದಲ್ಲಿ 9.2 ರೇಟಿಂಗ್ ಪಡೆದ ‘ದಿ ಗಾಡ್ ಫಾದರ್’ ನಾಲ್ಕನೇ ಸ್ಥಾನದಲ್ಲಿ ‘ ದಿ ಡಾರ್ಕ್ ನೈಟ್’ ಸಿನಿಮಾ ಇದೆ.
ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಸೂರ್ಯ, ಲಿಜೋ ಮೋಲ್ ಜೋಸ್, ಮಣಿಕಂಟನ್ , ಪ್ರಕಾಶ್ ರಾಜ್, ರಜಿಶಾ ವಿಜಯನ್, ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.. ಸಿನಿಮಾಗೆ ಸೂರ್ಯ ಮತ್ತು ಜ್ಯೋತಿಕಾ ಬಂಡವಾಳ ಹೂಡಿದ್ಧಾರೆ..