ಹೈದ್ರಬಾದ್ : ಕನ್ನಡದ ಕಿರಿಕ್ ಪಾರ್ಟ್ ಸಿನಿಮಾ ಮೂಲಕ ಸಕ್ಸಸ್ ಪಡೆದು ಈಗ ಟಾಲಿವುಡ್ ,ಕಾಲಿವುಡ್ , ಬಾಲಿವುಡ್ ನಲ್ಲೂ ಬಿಂಚುತ್ತಿರುವ ರಶ್ಮಿಕಾ ಮಂದಣ್ಣ ಆಗಾಗ ಯಾವುದಾದ್ರೂ ಒಂದು ವಿಚಾರಕ್ಕೆ ಸುದ್ದಿಯಲ್ಲೇ ಇರುತ್ತಾರೆ.. ಹೆಚ್ಚಾಗಿ ಟ್ರೋಲ್ ಗೆ ಗುರಿಯಾಗೋ ನಟಿ ಕೂಡ ರಷ್ಮಿಕಾ ಅಂದ್ರೆ ತಪ್ಪಾಗಲ್ಲ. ಅಲ್ದೇ ಇತ್ತೀಚೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಿಂದಾಗಿಯೂ ರಷ್ಮಿಕಾ ಟ್ರೋಲಿಗರಿಗೆ ಆಹಾರವಾಗಿದ್ರು.. ಆದ್ರೆ ಇದೀಗ ರಶ್ಮಿಕಾ ಮಂದಣ್ಣ ಹೇಳಿಕೆ ಅಚ್ಚರಿ ಮೂಡಿಸಿದೆ.. ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಈಗ ಟಿಂಡರ್ ಅನ್ನುವ ಡೇಟಿಂಗ್ ಆಪ್ನಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಈ ವೇಳೆ ರಶ್ಮಿಕಾ ಟಿಂಡರ್ ಆಯೋಜಿಸಿದ್ದ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಡೇಟಿಂಗ್ ಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ಪ್ರಶ್ನೆಗಳಿಗೆ ರಶ್ಮಿಕಾ ಕೊಟ್ಟಿರೋ ಉತ್ತರ ಅಚ್ಚರಿ ಮೂಡಿಸಿದೆ.,. ಡೇಟಿಂಗ್ ಆಪ್ ನಲ್ಲಿ ಹುಡುಗರು ತಮ್ಮ ಪ್ರೊಫೈಲ್ನಲ್ಲಿ ಶರ್ಟ್ಲೆಸ್ ಫೋಟೊ ಹಾಕುತ್ತಾರೆ..
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳಾಗಿತ್ತು. ಇದಕ್ಕೆ ಉತ್ತರ ಕೊಟ್ಟ ರಶ್ಮಿಕಾ ಹುಡುಗರು ಚೆನ್ನಾಗಿ ವರ್ಕ್ಔಟ್ ಮಾಡಿ, ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟುಕೊಳ್ಳುವವರನ್ನು ಅಭಿನಂದಿಸುತ್ತೇನೆ. ಅದು ಅವರ ಡೆಡಿಕೇಷನ್ ಅನ್ನು ತೋರಿಸುತ್ತದೆ. ಆದರೆ ಡೇಟಿಂಗ್ ಆಪ್ ನಲ್ಲಿ ಅವರು ಶರ್ಟ್ ಬಿಚ್ಚಿದ ಫೋಟೊವನ್ನು ಯಾಕೆ ಹಾಕುತ್ತಾರೆ.. ನನಗೆ ಇದು ಮಾತ್ರ ಅರ್ಥ ಆಗಲ್ಲ. ಈ ವಿಚಾರದಲ್ಲಿ ನಾನು ಹಳೆಯ ಕಾಲದವರ ಹಾಗೆ ಯೋಚಿಸುತ್ತೇನೆ ಎಂದು ಹೇಳಿದ್ದಾರೆ.. ಅಲ್ಲದೇ ಬೋರ್ಡಿಂಗ್ ಶಾಲೆಯಲ್ಲಿ ಓದಿರುವ ನನಗೆ, ಅಲ್ಲಿ ಯಾರಾದ್ರೂ ಒಬ್ಬ ಹುಡುಗನನ್ನ ನೇರವಾಗಿ ನೋಡಿದ್ರೆ ಸಾಕು ಡೇಟಿಂಗ್ ಎನ್ನುತ್ತಿದ್ರು ಎಂದು ತಮ್ಮ ಶಾಲಾ ದಿನಗಳ ಅನುಭವ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ನಿಮಗಿಂತ ಚಿಕ್ಕವರ ಜೊತೆಗೆ ಡೇಟ್ ಹೋಗುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ ಡೇಟ್ ಮಾಡೋದಕ್ಕೆ ವಯಸ್ಸು ಮುಖ್ಯ ಆಗೋದಿಲ್ಲ ವ್ಯಕ್ತಿ ಮುಖ್ಯ ಎಂದು ಉತ್ತರಿಸಿದ್ದಾರೆ..