ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಇಡೀ ಕರುನಾಡು , ಅಭಿಮಾನಿಗಳು , ಅಪ್ಪು ಕುಟುಂಬಕ್ಕೆ ದೊಡ್ಡ ಆಘಾತ ತಂದಿದೆ.. ಇನ್ನೂ ವರೆಗೂ ಈ ನೋವಿನಿಂದ ಯಾರೂ ಕೂಡ ಹೊರಬಂದಿಲ್ಲ.. ಇತ್ತೀಚೆಗೆ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮನ ಕಾರ್ಯಕ್ರಮಕ್ಕೆ ಮುನ್ನ ಪತ್ನಿ ಅಶ್ವಿನಿ ಅವರು ಅಭಿಮಾನಿಗಳಿಗೆ ಪತ್ರವೊಂದನ್ನ ಬರೆದು ಧನ್ಯವಾದಗಳನ್ನ ಅರ್ಪಿಸಿದ್ರು.
— Ashwini Puneeth Rajkumar (@ashwinipuneet) November 16, 2021
ಅವರ ಈ ಪತ್ರ ಈಗ ವೈರಲ್ ಆಗಿದೆ. ಪುನೀತ್ ಅಗಲುವಿಕೆ ನಮ್ಮಷ್ಟೇ ನಿಮಗೂ ನೋವು ತಂದಿದೆ ಎಂದು ನನಗೆ ಗೊತ್ತು. ಆದರೆ ಇಂಥಾ ಕಠಿಣ ಪರಿಸ್ಥಿತಿಯಲ್ಲೂ ನೋವು ನುಂಗಿ ಎಲ್ಲಾ ಕಾರ್ಯಗಳನ್ನು ಶಾಂತ ರೀತಿಯಲ್ಲಿ ಮಾಡಲು ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು. ನಿಮ್ಮ ಮೆಚ್ಚಿನ ಅಪ್ಪು ಸಮಾಜಕಾರ್ಯಗಳನ್ನು ಆದರ್ಶವಾಗಿಟ್ಟುಕೊಂಡು ನೇತ್ರದಾನ, ಸಮಾಜ ಸೇವೆ ಮಾಡಲು ಮುಂದಾಗಿರುವ ನೀವೆಲ್ಲಾ ಅಭಿನಂದನಾರ್ಹರು. ಅವರು ಯಾವತ್ತೂ ನಿಮ್ಮ ಒಳ್ಳೆಯ ಕೆಲಸಗಳಲ್ಲಿ ಜೀವಂತವಾಗಿರುತ್ತಾರೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ನಾನು ಮತ್ತು ಕುಟುಂಬದವರು ಅಭಾರಿಗಳಾಗಿರುತ್ತೇವೆ ಎಂದು ಅಶ್ವಿನಿ ಪತ್ರದಲ್ಲಿ ಹೇಳಿದ್ದಾರೆ.