ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಅತಿ ಹೆಚ್ಚಾಗಿ ಪ್ರೇಕ್ಷಕರ ಗಮನ ಸೆಳೆದ ಅರವಿಂದ್ ಹಾಗೂ ದಿವ್ಯಾ ಉರುಡುಗ (ಆರ್ವಿಯಾ) ಜೋಡಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಟ್ಟಾಗಿ ಕಾಣಿಸಿಕೊಳ್ತಿದೆ.. ಆರ್ವಿಯಾ ಜೋಡಿಯ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ..
ಈ ನಡುವೆ ಇತ್ತೀಚೆಗಷ್ಟೇ ಹೈದ್ರಾಬಾದ್ ಗೆ ಹಾರಿದ್ದ ಈ ಜೋಡಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಅವರ ಜೊತೆಗೆ ದಿಯಾ ಸಿನಿಮಾ ಖ್ಯಾತಿಯ ಖುಷಿ ಕೂಡ ವಿಮಾನದಲ್ಲಿ ಕಾಣಿಸಿಕೊಂಡಿದ್ರು.. ಇದೀಗ ಮತ್ತೊಮ್ಮೆ ಈ ಜೋಡಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ದಿವ್ಯಾ ಅರವಿಂದ್ ಕೆ. ಪಿ ಅವರ ಕೈಯಿಂದ ಅವಾರ್ಡ್ ಪಡೆದುಕೊಂಡಿದ್ದಾರೆ..
ಈ ಫೋಟೋವನ್ನ ವಿದ್ಯಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.. ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ..
ಈ ವೇಳೆ “ಫೇಸ್ ಟೂ ಫೇಸ್” ಚಿತ್ರಕ್ಕಾಗಿ ನಟಿ ದಿವ್ಯಾ ಉರುಡುಗಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಅವಾರ್ಡ್ ಅನ್ನು ದಿವ್ಯಾ ಉರುಡುಗ ಕೆ. ಪಿ ಅರವಿಂದ್ ಅವರ ಕೈಯಿಂದ ಸ್ವೀಕರಿಸಿದ್ದಾರೆ. ಸದ್ಯ ಈ ಫೋಟೋವನ್ನು ದಿವ್ಯಾ ಉರುಡುಗ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಫೋಟೋ ಜೊತೆಗೆ, ಸಂತೋಷಮ್ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ನಲ್ಲಿ ಫೇಸ್ 2 ಫೇಸ್ ಚಲನಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ ಮತ್ತು ರಾಷ್ಟ್ರದ ಹೆಮ್ಮೆಯ ವ್ಯಕ್ತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ, ಅವರನ್ನು ನಾನು ಹೆಚ್ಚು ಗೌರವಿಸುತ್ತೇನೆ ಮತ್ತು ಆರಾಧಿಸುತ್ತೇನೆ. ಕೆಪಿ ಅರವಿಂದ್ ಅನೇಕರಿಗೆ ಸ್ಫೂರ್ತಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ಬೈಕ್ ರೇಸರ್ ಅರವಿಂದ್ ಕೆ.ಪಿ ಅವರು ಈ ಸೀಸನ್ ನಲ್ಲಿ ಮೊದಲ ರನ್ನರ್ ಅಪ್ ಆಗಿದ್ರು.. 2ನೇ ರನ್ನರ್ ಅಪ್ ದಿವ್ಯಾ ಉರುಡುಗ ಆಗಿದ್ರು.. ಇಬ್ಬರೂ ಸಹ ಟಾಸ್ಕ್ ವಿಚಾರದಲ್ಲಿ ಸಖತ್ ಟಫ್ ಕಾಂಪಿಟೇಟರ್ ಗಳೇ ಆಗಿದ್ದವರು.. ಆದ್ರೂ ಇವರ ಕೆಮಿಸ್ಟ್ರಿಯೇ ಈ ಸೀಸನ್ ನಲ್ಲಿ ಸಖತ್ ಹೈಲೇಟ್ ಆಯ್ತು..
ಅಂದ್ಹಾಗೆ ಇತ್ತೀಚೆಗೆ ಬಿಗ್ ಬಾಸ್ ನ ಸಹ ಸ್ಪರ್ಧಿ ಶುಭಾ ಪೂಂಜಾ ಜೊತೆಗೆ ಕಾಣಿಸಿಕೊಮಡಿತ್ತು. ಶುಭಾ ಈ ಫೊಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು..