ಮುಂಬೈ : ಬಾಲಿವುಡ್ ನ ಟಾಪ್ ನಿರ್ದೇಶಕ ಆಕ್ಷನ್ ಸಿನಿಮಾಗಳ ಸರದಾರ , ಕಾಮಿಡಿ ಸೀನ್ ಗಳ ಕೊರೆತಯಿಲ್ಲದೇ ಪೈಸಾ ವಸೂಲ್ ಸಿನಿಮಾಗಳನ್ನ ತೆಗೆಯೋದ್ರಲ್ಲಿ ರೋಹಿತ್ ಶೆಟ್ಟಿ ಮಾಸ್ಟರ್ ಮೈಂಡ್.. ಗೋಲಾ ಮಾಲ್ ಸೀರೀಸ್ ಖ್ಯಾತಿಯ ರೋಹಿತ್ ಶೆಟ್ಟಿ ಅವರ ನಿರ್ದೇಶನದ ಅಕ್ಷಯ್ ಕುಮಾರ್ , ಕತ್ರೀ ಕೈಫ್ ನಟಿಸಿರುವ ಸೂರ್ಯವಂಶಿ ಸಿನಿಮಾ ಇತ್ತೀಚೆಗಷ್ಟೇ ಭಾರತದಾದ್ಯಂತ ರಿಲೀಸ್ ಆಗಿ ಭರ್ಜರಿಯಾಗಿ ಪ್ರದರ್ಶನ ಕಾಣ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಖಾನ್ ಗಳ ರೆಕಾರ್ಡ್ ಬ್ರೇಕ್ ಮಾಡಿ ಅದ್ಧೂರಿಯಾಗಿ ತೆರೆಕಾಣ್ತಿದೆ.. ಈವರೆಗೂ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ..
ಸದ್ಯ ಸಿನಿಮಾ ತಂಡ ಸಕ್ಸಸ್ ಖುಷಿಯಲ್ಲಿದೆ.. ಈ ಸಿನಿಮಾದಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.. ಇನ್ನೂ ಕರೋನಾ ಎರಡನೆಯ ಅಲೆ ನಂತರ ಬಿಡುಗಡೆಯಾದ ಬಾಲಿವುಡ್ ಚಿತ್ರಗಳಲ್ಲಿ ಅತ್ಯಂತ ಯಶಸ್ಸು ಕಂಡ ಚಿತ್ರ ಕೂಡ ಸೂರ್ಯವಂಶಿಯೇ ಆಗಿದೆ. ಇನ್ನು ಈ ಚಿತ್ರದ ಬಗ್ಗೆ ‘ದಿ ಕ್ವಿಂಟ್’ಯ ವಿಶೇಷ ಸಂದರ್ಶನದಲ್ಲಿ ರೋಹಿತ್ ಶೆಟ್ಟಿ ಅವರು ಭಾಗಿಯಾಗಿದ್ರು.. ಈ ವೇಳೆ ಹಲವಾರು ಕುತೂಹಲಕಾರಿ ವಿಚಾರಗಳನ್ನ ತೆರೆದಿಟ್ಟಿದ್ದಾರೆ ರೋಹಿತ್..
ಈ ವೇಳೆ ನಾನು ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳನ್ನು ಮಾಡುತ್ತೇನೆ. ಅದರಲ್ಲೂ ಸಿಂಗಲ್ ಥಿಯೇಟರ್ ಪ್ರೇಕ್ಷಕರು ನನ್ನ ಮೊದಲನೆಯ ಸಿನಿಮಾ ವರ್ಗ. ಅವರನ್ನು ಸಂತೃಪ್ತಿಪಡಿಸುವ ಪ್ರಯತ್ನ ನನ್ನ ಸಿನಿಮಾಗಳು ಮಾಡುತ್ತವೆ. ನನ್ನ ಚಿತ್ರಗಳನ್ನು ಇಷ್ಟಪಡುವ ಒಂದು ವರ್ಗವಿದೆ. ಅದೇ ಸಂದರ್ಭದಲ್ಲಿ ನನ್ನ ಚಿತ್ರಗಳನ್ನು ಕ್ರಿಟಿಸೈಸ್ ಮಾಡುವ ವರ್ಗ ಕೂಡ ಇದೆ. ನನ್ನ ಚಿತ್ರಗಳನ್ನು ನೋಡುವ ಪ್ರೇಕ್ಷಕರಿಗಾಗಿಯೇ ನಾನು ಸದಾ ಸಿನಿಮಾಗಳನ್ನು ಮಾಡುತ್ತಿರುತ್ತೇನೆ ಎಂದಿದ್ದಾರೆ..
ಇದೇ ವೇಳೆ ಸಂದರ್ಶಕಿ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮುಸ್ಲಿಂ ಹೆಸರಿಡುವ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಕೇಳಿದ್ದಾರೆ.. ಮುಸ್ಲಿಂ ಖಳನಾಯಕರ ಟೀಕೆಗೆ ಪ್ರತಿಕ್ರಿಯಿಸಿ ಶೆಟ್ಟಿ , ಹಿಂದೂ ಖಳನಾಯಕರು ಈ ಹಿಂದೆ ಏಕೆ ಸಮಸ್ಯೆಯನ್ನು ಸೃಷ್ಟಿಸಲಿಲ್ಲ. ಸಿಂಗಂನಲ್ಲಿ ವಿಲನ್ ಪಾತ್ರದ ಹೆಸರು ಜಯಕಾಂತ್ ಶಿಕ್ರೆ, ಒಬ್ಬ ಹಿಂದೂ, ಕಾಪ್ ಯೂನಿವರ್ಸ್ ಇದರಲ್ಲಿ, ಒಬ್ಬ ಹಿಂದೂ ದೇವಮಾನವ ಅವನು ಖಳನಾಯಕನಾಗಿದ್ದನು. ಸಿಂಬಾದಲ್ಲಿ, ದೂರ್ವಾ ಯಶವಂತ್ ರಾನಡೆ ಒಬ್ಬ ಮಹಾರಾಷ್ಟ್ರದವರು. ಈ ಮೂರು ಚಿತ್ರಗಳಲ್ಲಿ ನಕಾರಾತ್ಮಕ ಶಕ್ತಿಗಳು ಹಿಂದೂಗಳಾಗಿದ್ದವು. ಅದು ಏಕೆ ಸಮಸ್ಯೆಯಾಗಲಿಲ್ಲ.. ಎಂದು ಕೇಳಿದ್ದಾರೆ.
ಈಗ ವಿಲನ್ ಪಾಕಿಸ್ತಾನದಿಂದ ಬಂದರೆ ಆತನ ಜಾತಿ ಅಥವಾ ಧರ್ಮ ಯಾವುದಾಗಿರುತ್ತದೆ. ಕಥೆಗೆ ಅನುಗುಣವಾಗಿಯೇ ವಿಲನ್ ಪಾತ್ರಗಳು ಸೃಷ್ಟಿ ಮಾಡಲಾಗುತ್ತದೆ ಇದರಲ್ಲಿ ಯಾವುದೇ ಜಾತಿ ಅಥವಾ ಧರ್ಮವನ್ನು ಬೆರೆಸುವ ಉದ್ದೇಶ ಇರುವುದಿಲ್ಲ. ಸಿನಿಮಾ ನೋಡುವ ಸಾಮಾನ್ಯ ಪ್ರೇಕ್ಷಕರಿಗೆ ಇದು ಯಾವುದು ಕೂಡ ಸಮಸ್ಯೆಗೆ ಕಾಣುವುದಿಲ್ಲ, ಆದರೆ ಕೆಲವು ಪತ್ರಕರ್ತರಿಗೆ ಪ್ರತಿಯೊಂದರಲ್ಲೂ ಯಾವುದೋ ಒಂದು ನಕಾರಾತ್ಮಕತೆ ಹುಡುಕುತ್ತಿರುವವರಿಗೆ ಇದೆಲ್ಲವೂ ಕೂಡ ಸಮಸ್ಯೆಯಾಗಿ ಕಾಣುತ್ತದೆ ಅಷ್ಟೇ, ನಮ್ಮಲ್ಲಿ ಸ್ಲೀಪರ್ ಸೆಲ್ ಇದ್ದರೆ ಸ್ಲೀಪರ್ ಸೆಲ್ ನಲ್ಲಿರುವನಿಗೆ ಯಾವ ಹೆಸರು ಕೊಡಬೇಕಾಗುತ್ತದೆ. ಖಳನಾಯಕನಿಗೆ ಮುಸ್ಲಿಂ ಹೆಸರಿಟ್ಟರೆ ತಪ್ಪೇನು..? ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.