ಅಕ್ಷಯ್ ಕುಮಾರ್ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಆಕ್ಷನ್ ಸಿನಿಮಾಗಳ ಸರದಾರರೋಹಿತ ಶೆಟ್ಟಿ ಆಕ್ಷನ್ ಕಟ್ ಹೇಳಿಸಿರುವ ಸಿನಿಮಾ, ಸಿಂಗಮ್ ಅಜಯ್ ದೇವಗಾನ್ , ಸಿಂಬಾ ರಣವೀರ್ ಸಿಂಗ್ ಕ್ರೇಜ್ ನಿಂದ ಸೂಪರ್ ಆಗಿ ಥಿಯೇಟರ್ ಗಳಲ್ಲಿ ಓಡ್ತಿರುವ
ಬಾಲಿವುಡ್ ಸಿನಿಮಾ ಸೂರ್ಯವಂಶಿ ಬಾಕ್ಸ್ ಆಫೀಸ್ ನಲ್ಲಿ ಖಾನ್ ಗಳ ರೆಕಾರ್ಡ್ ಬ್ರೇಕ್ ಮಾಡಿ ಇನ್ನೂವರೆಗೂ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ..
ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 170 ಕ್ಕೂ ಅಧಿಕ ಕಲೆಕ್ಷನ್ ಮಾಡಿದೆ.. ಈ ಚಿತ್ರ 2ನೇ ವಾರದಲ್ಲಿ ಒಟ್ಟು 151.23 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಬಗ್ಗೆ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಸಿನಿಮಾ ಬಗ್ಗೆ ಇತ್ತೀಚೆಗೆ ಕೆಲ ವಿವಾದಗಳು ಕೂಡ ಎದ್ದಿತ್ತು.. ಅನೇಕರು ಸಿನಿಮಾದಲ್ಲಿ ವಿಲ್ಲನ್ ಗೆ ಮುಸ್ಲಿಂ ಹೆಸರಿಟ್ಟ ಬಗ್ಗೆ ಪ್ರಶ್ನೆ ಮಾಡಿ ಟೀಕೆ ಮಾಡಿದ್ದರು.. ಆದ್ರ ಇದಕ್ಕೆ ರೋಹಿತ್ ಶೆಟ್ಟಿ ಖಡಕ್ ಆಗಿ ಉತ್ತರ ಕೊಟ್ಟಿದ್ರು..
ಖಳನಾಯಕನಿಗೆ ಮುಸ್ಲಿಂ ಹೆಸರಿಟ್ಟರೇನು ತಪ್ಪು.. ಈ ಹಿಂದೆ ಹಲವಾರು ಸಿನಿಮಾಳಲ್ಲಿ ವಿಲ್ಲನ್ ಗಳಿಗೆ ಹಿಂದೂ ಹೆಸರಿಡಲಾಗಿದೆ.. ಆಗ ಅದು ತೊಂದರೆಯಾಗಲಿಲ್ಲ ಏಕೆ..? ಎಂದು ಪ್ರಶ್ನೆ ಮಾಡಿದ್ದರು..