ಹೈದ್ರಾಬಾದ್ : ಬಾಹುಬಲಿ ಸಿನಿಮಾ ನಂತರ ಅಂತರಾಷ್ಟ್ರೀಯ ಮಟ್ಟದಲ್ಲೂ ಅಭಿಮಾನಿಗಳನ್ನ ಸಂಪಾದಿಸಿರುವ ಪ್ರಭಾಸ್ ಪ್ರಸ್ತುತ ಭಾರತದ ಬಿಗ್ ಸ್ಟಾರ್ ಆಗಿದ್ದಾರೆ.. ಹೀಗೆ ಪ್ರಭಾಸ್ ಅಭಿಮಾನಿಯೊಬ್ರು ವಿಶೇಷ ರೀತಿಯಲ್ಲಿ ಅಭಿಮಾನ ತೋರಿಸಿಕೊಂಡಿದ್ದು ಅವರಿಗೆ ‘ಡಾರ್ಲಿಂಗ್’ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ..
ಹೌದು.. ಪ್ರಭಾಸ್ ಅಭಿಮಾನಿಯೊಬ್ರು ‘ಪ್ರಭಾಸ್’ ಅನ್ನೋ ಹೆಸರಿನ ಹೇರ್ ಸ್ಟೈಲ್ ಮಾಡಿಸಿ ಬಾಹುಬಲಿಯ ದಿಲ್ ಖುಷ್ ಮಾಡಿದ್ದಾರೆ.. ಹೌದು ಈ ಅಭಿಮಾನಿಯನ್ನ ಮನೆಗೆ ಕರೆಸಿಕೊಂಡ ಪ್ರಭಾಸ್ ಅವರ ಜೊತೆಗೆ ಸಮಯ ಕಳೆದಿದ್ದಾರೆ.. ಅಲ್ಲದೇ ಆತನಿಗೆ ದುಬಾರಿ ವಾಚ್ ಗಿಫ್ಟ್ ಆಗಿ ನೀಡಿದ್ದು, ಈ ಸಂಬಂದಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ..
ಪ್ರಭಾಸ್ ಗೆ ಅಪಾರ ಫ್ಯಾನ್ ಗಳಿದ್ದಾರೆ.. ಆದ್ರೆ ಇತ್ತೀಚೆಗೆ ಓರ್ವ ಫ್ಯಾನ್ ಅತಿರೇಕದ ವರ್ತನೆಯಿಂದ ರಾಧೆ ಶ್ಯಾಮ್ ಸಿನಿಮಾತಂಡಕ್ಕೆ ಶಾಕ್ ಸಿಕ್ಕಿತ್ತು.. ರಾಧೆ ಶ್ಯಾಮ್ ಸಿನಿಮಾದ ಅಪ್ ನೀಡಿಲ್ಲಾ ಎಂದು ಈ ಅಭಿಮಾನಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಹರಿಬಿಟ್ಟಿದ್ದ… ಆದ್ರೆ ಚಿತ್ರತಂಡ ಈ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲವಾದ್ರೂ ಅದದರ ಬೆನ್ನಲ್ಲೇ ಸಿನಿಮಾದ ಹಾಡು ರಿಲೀಸ್ ಆಗಿತ್ತು.. ಈ ಹಾಡು ಸಖತ್ ಸೌಂಡ್ ಮಾಡ್ತಿದೆ..