ಬಿಗ್ ಬಾಸ್ ರಿಯಾಲಿಟಿ ಶೋ ಭಾರತದಲ್ಲಿ ಪ್ರಸಾರವಾಗುತ್ತಿರುವ ಅಷ್ಟೂ ಭಾಷೆಗಳಲ್ಲೂ ಕೂಡ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದುಕೊಂಡಿದೆ. ಬಿಗ್ ಬಾಸ್ ಅಂದ್ಮೇಲೆ ಅಲ್ಲಿ ನೌಟಂಕಿಗಳು ಹೈಡ್ರಾಮಾಗಳು , ಕಾಂಟ್ರವರ್ಶಿ , ಜಗಳ ಎಲ್ಲವೂ ಇರ್ಲೇಬೇಕು.. ಅದ್ರಲ್ಲೂ ಹಿಂದಿ ವರ್ಷನ್ ನಲ್ಲಿ ಇದು ಕೊಂಚ ಹೆಚ್ಚೇ. ಇದೀಗ ಇಂತಹದ್ದೇ ಒಂದು ಹೈ ಡ್ರಾಮಾ ನಡೆದಿದೆ.. ಹಿಂದಿ ಬಿಗ್ ಬಾಸ್ ಮನೆಯಲ್ಲೇ ಸ್ಪರ್ಧಿಯೊಬ್ರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.. ಪಂಜಾಬಿ ಗಾಯಕಿ ಅಫ್ಸಾನಾ ಬಿಗ್ ಬಾಸ್ ಮನೆಯ ಅಡುಗೆ ಮನೆಯಲ್ಲಿ ಚಾಕು ಹಿಡಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಚಾಕು ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಅಫ್ಸಾನಾರನ್ನು ಮನೆಯ ಇತರೆ ಸ್ಪರ್ಧಿಗಳು ಹಿಡಿದು ಸಮಾಧಾನಗೊಳಿಸಿದ್ದಾರೆ. ಆದರೆ ಅಫ್ಸಾನಾ ಅಂದು ಆಡಿದ ರೀತಿ ಮನೆಯ ಇತರ ಸದಸ್ಯರಿಗೆ ತೀವ್ರ ಆತಂಕ ತಂದಿದೆ. ಜೊತೆಗೆ ಜನರು ಅಪ್ಸಾನಾ ಬಗ್ಗೆ ನಾನಾ ಮಾತುಗಳನ್ನಾಡುವಂತಾಗಿದೆ.. ಕೆಲವರು ಇವೆಲ್ಲಾ ಪಬ್ಲಿಸಿಟಿ ಗಿಮಿಕ್ ಅಂದ್ರೆ , ಕೆಲವರು ನಾಟಕವಾಡುತ್ತಾ ಸಿಂಪತಿಗಾಗಿ ಹೀಗೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಮತ್ತೊಂದ್ ಕಡೆ ಶೋ ಬಗ್ಗೆಯೂ ನೆಗೆಟಿವ್ ಇಮ್ಯೇಜ್ ಮೂಡಿದ್ದು, ಆಯೋಜಕರಿಗೆ ಆತಂಕ ಮೂಡಿಸಿದೆ.. ಅಷ್ಟೇ ಅಲ್ಲ ಇಷ್ಟೆಲ್ಲಾ ರಾದ್ಧಾಂತ ನಡೆದ ಮೇಲೆ ಆಯೋಜಕರು ಆಕೆಯನ್ನ ಶೋನಿಂದಲೇ ಹೊರಹಾಕಿದ್ದಾರೆ.. ಆದ್ರೆ ಅಪ್ಸಾನಾ ಮಾತ್ರ ಮನೆಯಿಂದ ಹೊರ ಹೋಗೋದಕ್ಕೆ ತಯಾರಿಲ್ಲ.
ನಾನು ಮನೆಯಿಂದ ಹೊರಹೋಗಲ್ಲ ಎಂದು ಕಿರುಚಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.. ಹೇಗೋ ಮಾಡಿ ಬಿಗ್ ಬಾಸ್ ಮನೆಯಿಂದ ಆಕೆಯನ್ನ ಹೊರಹಾಕಲಾಗಿದೆ. ಆದ್ರೂ ಪಟ್ಟು ಬಿಡದ ಅಫ್ಸಾನಾ ಬಿಗ್ಬಾಸ್ ಕಚೇರಿಗೆ ಹೋಗಿ ಆಯೋಕರನ್ನು ಭೇಟಿ ಮಾಡಿ ತಾವು ಮರಳಿ ಶೋಗೆ ಹೋಗಬೇಕು ಎಂದು ಒತ್ತಾಯಿಸಿದ್ದಾರೆ. ಆಯೋಜಕರು ಕೆಲವು ಷರತ್ತುಗಳ ಮೂಲಕ ಅಫ್ಸಾನಾರನ್ನು ಮತ್ತೆ ಮನೆಗೆ ಕಳುಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಅಫ್ಸಾನಾರಿಗೆ ಬಿಗ್ಬಾಸ್ ಮನೆಯಲ್ಲಿದ್ದಾಗ ಪ್ಯಾನಿಕ್ ಅಟ್ಯಾಕ್ ಬಂದಿತ್ತು ಎನ್ನಲಾಗುತ್ತಿದೆ. ವೈದ್ಯಕೀಯ ತಂಡವು ಅಫ್ಸಾನಾರನ್ನು ಪರೀಕ್ಷೆ ಸಹ ಮಾಡಿತು.