ಚೆನ್ನೈ : ತಮಿಳಿನ ಜನಪ್ರಿಯ ನಟ ಸಿಂಬು ಅವರು ವೇದಿಕೆ ಮೇಲೆ ಗಳಗಳನೆ ಅತ್ತಿದ್ದು ಅವರ ೀ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಹೌದು ಸಿಂಬು ನಟನೆಯ ತಮಿಳಿನ ‘ಮಾನಾಡು’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಂಬರಸನ್ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡುವಾಗ ಕಣ್ಣೀರಿಟ್ಟಿದ್ದಾರೆ. ‘ನನಗೆ ಸಿನಿಮಾರಂಗದಲ್ಲಿ ಬಹಳಷ್ಟು ಮಂದಿ ತೊಂದ್ರೆ ಕೊಟ್ಟಿದ್ದಾರೆ.
ಈಗಲೂ ಕೊಡುತ್ತಿದ್ದಾರೆ. ಆದ್ರೆ ನಾನು ಸಮಸ್ಯೆಗಳನ್ನ ಎದುರಿಸುತ್ತೇನೆ. ನನಗೆ ತೊಂದ್ರೆ ಕೊಡುತ್ತಿರುವವರನ್ನ ನಾನು ನೋಡಿಕೊಳ್ತೇನೆ.. ನೀವು ನನ್ನನ್ನ ನೋಡಿಕೊಳ್ಳಿ, ನನನ್ನ ಹೀಗೇ ಪ್ರೀತಿಸಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿಕೊಳ್ತಾ ಕಣ್ಣೀರು ಹಾಕಿದ್ದಾರೆ.