ಮುಂಬೈ : ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳ ಮುಂದೆ ದಕ್ಷಿಣ ಭಾರತೀಯ ಸಿನಿಮಾಗಳು ಏನೂ ಇಲ್ಲವಂತೆ ಇತ್ತು.. ಆದ್ರೀಗ ಕಾಲ ಬದಲಾಗಿದೆ.. ಬಾಲಿವುಡ್ ಗೆ ತಲೆ ದಿಮ್ಮುವಂತಹ ಬಿಗ್ ಬಜೆಟ್ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಕೇವಲ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಹಿಟ್ ಆಗ್ತಿವೆ.. ಬಾಹುಬಲಿ ಇರಬಹುದು ಪುಷ್ಪ ಇರಬಹುದು.. ಈ ಸಿನಿಮಾಗಳು ಈಗಾಗಲೇ ಇದಕ್ಕೆ ಸಾಕ್ಷಿ..
ಇದೇ ಸಾಲಿಗೆ ಕೆಜಿಎಫ್ 2 , ಪಪುಷ್ಪ , RRR ಸಿನಿಮಾಗಳು ಕೂಡ ಸೇರಲಿವೆ.. ಆದ್ರೆ ಈಗ ರಾಕಿ ಭಾಯ್ ಗೆ ಟಕ್ಕರ್ ಕೊಡೋಕೆ ಹೊರಟಿದ್ದಾರೆ ‘ಲಾಲ್ ಸಿಂಗ್ ಚಡ್ಡಾ’.. ಹೌದು ಲಾಲ್ ಸಿಂಗ್ ಚಡ್ಡಾ ಅಮಿರ್ ಖಾನ್ ಅಭಿನಯದ ಬಹುನಿರೀಕ್ಷೆ ಸಿನಿಮಾ ಈ ಸಿನಿಮಾ ಯಶ್ ಹಾಗೂ ಪ್ರಶಾಂತ್ ನೀಲ್ ರ ಕೆಜಿಎಫ್ 2 ರಿಲೀಸ್ ಆಗಲಿರುವ ದಿನವೇ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ..
ಅಂದ್ಹಾಗೆ ಅಮೀರ್ ಖಾನ್ ತನ್ನ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಡಿಸೆಂಬರ್ 25ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಬಹುನಿರೀಕ್ಷಿತ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಕೂಡ ಅದೇ ಸಮಯಕ್ಕೆ ಬರುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮತ್ತೊಮ್ಮೆ ರಿಲೀಸ್ ಡೇಟ್ ಮುಂದೂಡಲಾಯ್ತು..
ರಾಜಮೌಳಿ ಎದುರು ಸೋತ ಬನ್ಸಾಲಿ ಪ್ರಸಕ್ತ ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಮಾತು ಪೋಸ್ಟ್ ಪೋನ್. ಹೌದು ಪ್ರಸ್ತುತ ಬಾಲಿವುಡ್ನಲ್ಲಿ ಯಾವ ಹಿಂದಿ ಚಿತ್ರ ಕೂಡ ಸೌತ್ನ ಫ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ಬಿಡುಗಡೆಮಾಡುವ ಸಾಹಸವನ್ನು ಮಾಡುತ್ತಿಲ್ಲ. ಹಿಂದೆ ‘ಕೆಜಿಎಫ್’ ಚಿತ್ರದ ಮುಂದೆ ‘ಜೀರೋ’ ಚಿತ್ರ ಜೀರೋ ಆಗಿಯೇ ಉಳಿದು ಹೋಯಿತು. ಬಾಲಿವುಡ್ನ ಬಾದ್ ಶಾಹ ಶಾರೂಖ್ ಖಾನ್ ಅಭಿನಯದ ‘ಜೀರೋ’ ಚಿತ್ರ ಯಶ್ ಅಭಿನಯದ ‘ಕೆಜಿಎಫ್’ ಎದುರು ಜೀರೋ ಆಗಿಯೇ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲನ್ನು ಕಂಡಿತು. ಇತ್ತೀಚೆಗೆ
ಇನ್ನು ಜನವರಿ 6ರಂದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್- ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಥೆವಾಡಿಯ’ ಬಿಡುಗಡೆಯಾಗಬೇಕಿತ್ತು. ಆದರೆ ಜನವರಿ 7ರಂದು ವಿಶ್ವದಾದ್ಯಂತ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದ ಬಿಡುಗಡೆ ಮಾಡುವ ಘೋಷಣೆಯಾಯಿತು.
ಬಳಿಕ ಅಮೀರ್ ಖಾನ್ ಫೆಬ್ರವರಿ 14 ಕ್ಕೆ ಲಾಲ್ ಸಿಂಗ್ ಚಡ್ಡಾ ಅನ್ನು ಮುಂದೂಡಿದರು. ಆದ್ರೆ ಇತ್ತ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ನಟನೆಯ ಗಂಗೂಭಾಯಿ ಕಾಥೆಯಾವಾಡಿ ಸಿನಿಮಾ ರಾಜಮೌಳಿ ಅವರ RRR ಗೆ ಟಕ್ಕರ್ ಕೊಡೋದು ಉಚಿತವಲ್ಲ ಅನ್ನೋ ನಿರ್ಧಾರಕ್ಕೆ ಬಂದು ಫೆಬ್ರವರಿ 18ಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಧಾರ ಮಾಡಿದ್ರು..
ಆದ್ರೆ ಇದು ಮತ್ತೆ ಅಮೀರ್ ಖಾನ್ ಸಿನಿಮಾಗೆ ಸಂಕಷ್ಟ ತಂದೊಡ್ಡಿದೆ.. ಇಷ್ಟಾದ್ರೂ ಪರವಾಗಿರಲಿಲ್ಲ.. ಫೆಬ್ರವರಿ 14ಕ್ಕೆ ಹೋದರೆ, ಫೆಬ್ರವರಿ 11ಕ್ಕೆ ಮತ್ತೊಂದು ಫ್ಯಾನ್ ಇಂಡಿಯಾ ಚಿತ್ರ ‘ಮೇಜರ್’, ರವಿತೇಜ ಅವರ ‘ಕಿಲಾಡಿ’ ಚಿತ್ರಗಳು ಕೂಡ ಬಿಡುಗಡೆಯಾಗಲಿದೆ.. ಈ ಎಲ್ಲಾ ಸಿನಿಮಾಗಳ ಮುಂದೆ ಲಾಲ್ ಸಿಂಗ್ ಗೆಲ್ಲೋಕೆ ಚಾನ್ಸೇ ಇಲ್ಲ ಅಂತ ಮತ್ತೆ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ.. ಆದ್ರೆ ಇಷ್ಟೆಲ್ಲಾ ಆದ್ಮೇಲೂ ‘ಲಾಲ್ ಸಿಂಗ್ ಚಡ್ಡಾ’ ಕಷ್ಟಗಳೆಲ್ಲಾ ಅಂತ್ಯವಾಗಲಿಲ್ಲ.. ಅಸಲಿಗೆ ಇಲ್ಲೇ ದೊಡ್ಡ ಸವಾಲು ಇರೋದು ಕಾರಣ ಏಪ್ರಿಲ್ 14ಕ್ಕೆ ಸಿನಿಮಾಗೆ ರಿಲೀಸ್ ಮಾಡೋ ಪ್ಲಾನ್ ಹಾಕಿಕೊಂಡಿದೆ ಚಿತ್ರತಂಡ.. ಆದ್ರೆ ಅಂದೇ KGF 2 ರಿಲೀಸ್ ಆಗಲಿದೆ.. ನಮ್ಮ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ KGF 2 ಗಾಗು ಇಡೀ ಭಾರತೀಯ ಸಿನಿಮಾ ಪ್ರೇಕ್ಷಕರೇ ಎದುರುನೋಡ್ತಿದ್ದಾರೆ.. ಹೀಗಿರುವಾಗ KGF ಮುಂದೆ ಅಮಿರ್ ಖಾನ್ ಸಿನಿಮಾ ನಿಲ್ಲುತ್ತಾ.. ರಾಕಿ ಭಾಯ್ ಗೆ ಟಕ್ಕರ್ ಕೊಡೋಕೆ ಆಗುತ್ತಾ ಅನ್ನೋ ಸವಾಲು ಎದುರಾಗಿದೆ..