ಜನ ಬೀದಿಗಿಳಿದು ಕಾನೂನುಗಳನ್ನ ಮಾಡಿದ್ರೆ ಸರ್ಕಾರ ಯಾಕಿರಬೇಕು : ಕಂಗನಾ
ಮುಂಬೈ : ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಅವರು ಸದಾ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಲ್ಲಿಯೇ ಇರುತ್ತಾರೆ.. ಯಾರ ವಿರುದ್ಧವಾದ್ರೂ ಹರಿಹಾಯುತ್ತಲೇ ಇರುತ್ತಾರೆ.. ಅಂತೆಯೇ ಇತ್ತೀಚೆಗೆ ರೈತರ ಪ್ರತಿಭಟನೆಗೆ ಮಣಿದ ಸರ್ಕಾರ ಕೃಷಿ ಕಾಯ್ದೆಗಳನ್ನ ವಾಪಸ್ ಪಡೆದ ನಂತರ ಈ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ..
ದುಃಖ, ನಾಚಿಕೆಗೇಡು, ಸಂಪೂರ್ಣವಾಗಿ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದ್ರೆ ಸರ್ಕಾರ ಯಾಕಿರಬೇಕು. ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಬಯಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಅಸಮಾಧಾನವನ್ನ ಹೊರಹಾಕಿದ್ದಾರೆ.
ಇದೇ ವೇಳೆ ಇಂದಿರಾಗಾಂಧಿಯ ಫೋಟೋ ಹಾಕಿ ರಾಷ್ಟ್ರದ ಆತ್ಮಸಾಕ್ಷಿಯು ಆಳವಾದ ನಿದ್ರೆಯಲ್ಲಿರುವಾಗ, ಲಾಠಿ ಒಂದೇ ಪರಿಹಾರ ಮತ್ತು ಸರ್ವಾಧಿಕಾರ ಒಂದೇ ಪರಿಹಾರ. ಜನ್ಮದಿನದ ಶುಭಾಶಯಗಳು ಮೇಡಂ ಪ್ರಧಾನ ಮಂತ್ರಿ ಎಂದು ಬರೆದುಕೊಂಡಿದ್ರು.
ಗುರುನಾನಕ್ ಜಯಂತಿಯ ವಿಶೇಷ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ರೈತರ ಬೃಹತ್ ಪ್ರತಿಭಟನೆಗೆ ಕಾರಣವಾದ ಮೂರು ಹೊಸ ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ರು.