ನಾನು ಈಗಲೂ ಕಾಯಲು ಸಿದ್ಧ : ಬೊಮ್ಮಾಯಿ ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ನೋವಿನಿಂದ ಈವರೆಗೂ ಚಿತ್ರರಂಗ ಹಾಗೂ ಅವರ ಕುಟುಂಬ ಹೊರಬಂದಿಲ್ಲ.. ಅವರಿಲ್ಲ ಅನ್ನೋ ಕಹಿ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.. ಬೊಮ್ಮಾಯಿ ಅವರು ಕೂಡ ಬಹಳ ಭಾವುಕರಾಗಿದ್ದರು..
ಈಗಲೂ ಕೂಡ ಬೊಮ್ಮಾಯಿ ಅವರು ಪ್ರತಿ ವೇದಿಕೆ ಮೇಲೂ ಅಪ್ಪು ಅವರನ್ನ ನೆನೆಯುತ್ತಿದ್ದಾರೆ.. ಇತ್ತೀಚೆಗೆ ಶ್ರೀ ಮುರಳಿ ಅವರ ಅಭಿನಯದ ‘ಮದಗಜ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪುನೀತ್ ರಾಜ್ಕುಮಾರ್ ಅವರಿಗೆ ನಮಿಸಿ ಕಾರ್ಯಕ್ರಮವನ್ನು ಆರಂಭ ಮಾಡಲಾಯಿತು. ಈ ವೇಳೆ ಮಾತನಾಡಿದ ಬೊಮ್ಮಾಯಿ ಅವರು ಪುನೀತ್ ರಾಜ್ಕುಮಾರ್ ಅವರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಅಪ್ಪು ಅಗಲಿಕೆಗೆ ಎರಡು ದಿನ ಮುನ್ನ ಅವರಿಗೆ ಫೋನರ್ ಮಾಡಿ ಯಾವುದೋ ಒಂದು ವಿಚಾರದ ಬಗ್ಗೆ ಕೇಳಿಕೊಂಡಿದ್ರಂತೆ.. ಅದನ್ನೂ ಕೂಡ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ..
ಮೊದಲಿಗೆ ಮಾತನಾಡಿದ ಸಿಎಂ ಅಪ್ಪು ನಮ್ಮನ್ನು ಬಿಟ್ಟು ಅಗಲಿಲ್ಲ. ಎಲ್ಲಿವರೆಗೆ ಕನ್ನಡಿಗರ ಹೃದಯ ಮಿಡಿಯುತ್ತೋ ಅಲ್ಲಿವರೆಗೂ ಅಪ್ಪು ನೆನಪಿರುತ್ತೆ. ಸಾಧಕನಿಗೆ ಸಾವು ಅಂತ್ಯವಲ್ಲ. ನಿಜವಾದ ಸಾಧಕನಿಗೆ ಸಾವಿನ ನಂತರವೂ ಹೇಗೆ ಬದುಕಬೇಕು ಅಂತ ಗೊತ್ತಿದೆ. ಅದನ್ನು ನಮ್ಮ ಅಪ್ಪು ಮಾಡಿ ತೋರಿಸಿದ್ದಾರೆ ಎಂದರು.
ಬಳಿಕ ಪುನೀತ್ ಸಾವಿಗೂ ಎರಡು ದಿನ ಮುಂಚೆ ನನಗೆ ಅವರು ಕಾಲ್ ಮಾಡಿದ್ರು. ಮಾಮಾ ಟೂರಿಸಂ ಬಗ್ಗೆ ವೆಬ್ ಸೈಟ್ ಮಾಡುತ್ತೇನೆ. ನೀವೇ ಬಂದು ಉದ್ಘಾಟನೆ ಮಾಡಬೇಕು ಅಂದಿದ್ದರು. ಮೊನ್ನೆ ತಾನೆ ಬಂದಿದ್ದೇನೆ. ಮತ್ತೆ ನಾನ್ಯಾಕೆ ಅಂದಿದ್ದೆ. ಇಲ್ಲಾ ನೀವೆ ಬರಬೇಕು. ಆ ಬಗ್ಗೆ ಮಾತಾಡುವುದಕ್ಕೆ ನೀವು ನನಗೆ ಟೈಮ್ ಕೊಡಬೇಕು ಅಂದಿದ್ದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.
ವಿಪರ್ಯಾಸವೆಂದ್ರೆ ಅಪ್ಪು ಅಗಲಿದ ದಿನವೇ ಸಿಎಂ ಭೇಟಿಯಾಗಬೇಕಿತ್ತು. ಅಕ್ಟೋಬರ್ 29ರಂದೇ ಪುನೀತ್ ರಾಜ್ ಕುಮಾರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಬೇಕಿತ್ತು. ಅಂದೇ ಬಂದು ಟೂರಿಸಂ ವೆಬ್ ಸೈಟ್ ಬಗ್ಗೆ ಮಾತಾನಾಡುತ್ತೇನೆ ಅಂತ ಹೇಳಿದ್ದರು. ಅದರೇ ಅಂದೇ ಪುನೀತ್ ರಾಜ್ಕುಮಾರ್ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಪುನೀತ್ ಅಂದುಕೊಂಡಿದ್ದ ವೆಬ್ ಸೈಟ್ ಮೂಲಕ ಅಪ್ಪು ಕಂಡ ಕನಸು ಕನಸಾಗಿಯೇ ಉಳಿದು ಹೋಯ್ತು ಎಂದಿದ್ದಾರೆ.
ಅಕ್ಟೋಬರ್ 29ರಂದು ಸಿಎಂ ಬಸರಾಜ ಬೊಮ್ಮಾಯಿ ಅರ್ಧ ಗಂಟೆ ಅಪಾಯಿಂಟ್ಮೆಂಟ್ ಕೊಟ್ಟಿದ್ದರು. ಅಂದು ಪುನೀತ್ ಸಿಎಂ ಭೇಟಿ ಮಾಡಿ ತನ್ನ ಟೂರಿಸಂ ವೆಬ್ ಸೈಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಿತ್ತು. ಆದರೆ, ಅಪ್ಪು ಅಂದು ಬರಲೇ ಇಲ್ಲ. ಅಂದು ಕೊಟ್ಟ ಅಪಾಯಿಂಟ್ಮೆಂಟ್ಗೆ ನಾನು ಕಾಯಲು ಸಿದ್ಧನಿದ್ದೇನೆ ಎಂದು ಸಿಎಂ ಹೇಳಿದ್ದಾರೆ.