ಬೆಂಗಳೂರು : ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಂಗೀತ ನಿರ್ದೇಶಕ ಹಂಸಲೇಖಾ ವಿರುದ್ಧ ನೀಡಿದ್ದ ದೂರನ್ನ ವಾಪಸ್ ಪಡೆಯಲಾಗಿದೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖಾ ವಿರುದ್ಧ ಕೃಷ್ಣರಾಜ್ ಎಂಬುವವರು ದೂರು ದಾಖಲಿಸಿದ್ದರು. ಇದೀಗ ಆ ದೂರನ್ನು ವಾಪಸ್ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೃಷ್ಣರಾಜ್, ಬ್ರಾಹ್ಮಣ ಸಂಘದ ದೂರಿಗೆ ನಾನು ಬೆಂಬಲಿಸ್ತೇನೆ ಅದಕ್ಕಾಗಿ ತನ್ನ ದೂರನ್ನು ಹಿಂಪಡೆಯುವುದಾಗಿ ಸಮಜಾಯಿಷಿ ನೀಡಿ ದೂರನ್ನು ಹಿಂಪಡೆದಿದ್ದಾರೆ.
ಕ್ಷಮೆ ಕೇಳಿದ್ದ ನಾದಬ್ರಹ್ಮ
ಇತ್ತೀಚೆಗಷ್ಟೇ ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಹಂಸಲೇಖ ಅವರು, ದಲಿತನ ಮನೆಗೆ ಬಲಿತ ಹೋಗುವುದು ದೊಡ್ಡದಲ್ಲ ದಲಿತನನ್ನ ಬಲಿತ ತನ್ನ ಮನೆಗೆ ಕರೆದುಕೊಂಡು ಹೋಗಬೇಕು . ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗ್ತಾರೆ ಅವರೆನು ಅಲ್ಲಿ ಕೋಳಿ ತಿಂತಾರಾ. ಕುರಿಯ ರಕ್ತ ಕುಡಿತಾರ. ಲಿವರ್ ತಿಂತಾರಾ ಎಂದು ಲೇವಡಿ ಮಾಡಿದ್ದರು. ಇದು ಶ್ರೀಗಳ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಟೀಕೆಗೆ ಒಳಗಾದ ನಂತರ ಎಚ್ಚೆತ್ತುಕೊಂಡಿದ್ದ ಹಂಸಲೇಖ ಫೇಸ್ ಬುಕ್ ನಲ್ಲಿ ವೀಡಿಯೋ ಬಿಡುಗಡೆ ಮಾಡಿ ಕ್ಷಮೆ ಕೇಳಿದ್ದರು.
ನಾನು ಮೊದಲನೆಯದಾಗಿ ಕ್ಷಮೆ ಕೇಳ್ತೇನೆ ಎರಡನೆಯದಾಗಿನೂ ಕ್ಷಮೆ ಕೇಳ್ತೇನೆ, ನಾನು ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದಿತ್ತು. ಅಸ್ಪೃಶ್ಯತೆಯನ್ನ ಹೊಡೆದೋಡಿಸಲು ಪೇಜಾವರ ಶ್ರೀಗಳು ಶ್ರಮ ವಹಿಸುತ್ತಿದ್ದಾರೆ. ನಾನು ಆಡಿದ ಮಾತುಗಳು ನನ್ನ ಪತ್ನಿ ಗೆ ಹಿಡಿಸಲಿಲ್ಲ ನನ್ನ ಪತ್ನಿಯ ಬಳಿಯೂ ನಾನು ಕ್ಷಮೆಕೇಳಿದ್ದೇನೆ. ನಾನು ಸಂಗೀತಗಾರ ಕಂಟ್ರೋಲ್ ನಲ್ಲಿ ಇರಬೇಕಿತ್ತು. ಯಾರಿಗೂ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು.