ಪ್ರಸ್ತುತ ಭಾರತದ ಬಿಗ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗಷ್ಟೇ ನಡೆದ ಇಂಡಿಯನ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್ ಬಗ್ಗೆ ಮಾತನಾಡಿ ಯುವಕರು ಹುಮ್ಮಸ್ಸನ್ನ ಹೆಚ್ಚಿಸಿದ್ದಾರೆ..
ಹೌದು ಲೀಗ್ ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಶ್ ಅವರ ಸ್ಪೂರ್ತಿದಾಯಕ ಮಾತುಗಳು ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದೆ.. ಬದುಕಿನ ಆಟ ಆಡಲು ಕ್ರೀಡೆ ಮುಖ್ಯ.. ಯಾರು ಜೀವನದಲ್ಲಿ ಆಟ ಆಡುವುದಿಲ್ಲವೋ ಅವರು ಮುಂದೆ ಬದುಕಿನ ಆಟ ಆಡಲು ಆಗುವುದಿಲ್ಲ.. ಯಾಕಂದ್ರೆ , ಸೋಲು ಗೆಲುವನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ಯಾರು ಕಲಿಯುತ್ತಾರೋ ಅವರು ಬದುಕನ್ನ ಮುಂದೆ ತೆಗೆದುಕೊಂಡು ಹೋಗಲು ಸಾಧ್ಯ.. ಅದನ್ನ ಕಲಿಸುವುದು ಕ್ರೀಡೆ ಮಾತ್ರ ಎಂದಿದ್ದಾರೆ ರಾಕಿ ಭಾಯ್..
ಭಾರತದಲ್ಲಿ ಮಕ್ಕಳಿಗೆ ಕ್ರೀಡೆ ಮೇಲೆ ಆಸಕ್ತಿ ಇದ್ರೂ ಹಲವರ ಪೋಷಕರು ಪ್ರೋತ್ಸಾಹ ನೀಡುವುದಿಲ್ಲ. ಹೀಗಾಗಿ ಕೌನ್ಸಿಲಿಂಗ್ ಮಕ್ಕಳಿಗಲ್ಲ ಪೋಷಕರಿಗೆ ಬೇಕು.. ಸ್ಪೋರ್ಟ್ಸ್ ಆಡಿಕೊಂಡು ಮಕ್ಕಳು ಬದುಕಬಹುದು ಅನ್ನುವ ದಾರಿ ನೀವು ತೋರಿಸಿದಾಗ, ಮಕ್ಕಳು ಆಟ ಆಡುವುದಕ್ಕೆ ರೆಡಿ ಇದ್ದಾರೆ. ನಮ್ಮ ದೇಶದಲ್ಲಿ ಆ ಒಂದು ಕೆಲಸ ಆಗಲಿ ಎಂದು ನಾನು ಬೇಡಿಕೊಳ್ಳುತ್ತೇನೆ. ಬಾಸ್ಕೆಟ್ ಬಾಲ್ ಶುರುವಾಗಲಿ, ತುಂಬಾ ವಿಷಯದಲ್ಲಿ ನಮ್ಮ ದೇಶ ಹೈಡ್ ಆಗಿದೆ. ಏನಾದರೂ ಒಂದು ಗೆದ್ದರೆ ನಮ್ಮ ದೇಶದಲ್ಲಿ ತಪ್ಪು ಅಂತಾರೆ. ಆದರೆ, ಇಲ್ಲ.. ವಿಶ್ವದೆಲ್ಲೆಡೆ ನೋಡಿದ್ರೆ, ಕ್ರೀಡೆ ಅನ್ನುವುದು ಸಂಪಾದನೆ ಮಾಡುವುದೇ ಆಗಿದೆ ಎಂದಿದ್ದಾರೆ..
ಇನ್ನೂ ಈ ಕಾರ್ಯಕ್ರಮದಲ್ಲಿ ಯಶ್ ಹೊರಾತಗಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಗಾಯಕ ವಿಜಯ್ ಪ್ರಕಾಶ್ ಕೂಡ ಭಾಗವಹಿಸಿದ್ದರು.