ಪ್ರಸಾರವಾದ ಎಲ್ಲಾ ಭಾಷೆಗಳಲ್ಲೂ “ಕೋಟ್ಯೋಧಿಪತಿ” ರಿಯಾಲಿಟಿ ಶೋ ಸೂಪರ್ ಹಿಟ್ ಎನಿಸಿಕೊಂಡಿದೆ.. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡ್ತಿದ್ದ ಈ ರಿಯಾಲಿಟಿ ಶೋ ಬಳಿಕ ಕನ್ನಡ , ತಮಿಳು , ತೆಲುಗಿನಲ್ಲೂ ಬಂತು.. ಸಾಕಷ್ಟು ಜನಪ್ರಿಯತೆಯನ್ನೂ ಕೂಡ ಗಳಿಸಿಕೊಳ್ತು..
ಕನ್ನಡದಲ್ಲಿ ಈ ಶೋ ನಡೆಸಿಕೊಡ್ತಿದ್ದವರು ನಮ್ಮ ಅಪ್ಪು.. ಆದ್ರೀಗ ಅವರು ನಮ್ಮೊಂದಿಗಿಲ್ಲ.. ಹೀಗಾಗಿ ಮುಂದಿನ ಕೋಟ್ಯಾಧಿಪತಿ ನಡೆಸಿಕೊಡೋರು ಯಾರೆಂಬ ಪ್ರಶ್ನೆ ಇದ್ದೇ ಇದೆ..
ಪ್ರಸ್ತುತ ತೆಲುಗಿನ ಬಗ್ಗೆ ಮಾತನಾಡಿದ್ರೆ , ತೆಲುಗಿನಲ್ಲಿ ನಾಗಾರ್ಜುನ್ , ಚಿರಂಜೀವಿ ನಡೆಸಿಕೊಟ್ಟಿದ್ದಾರೆ.. ಪ್ರಸ್ತುತ ಈ ಜವಾಬ್ದಾರಿ ನಿಭಾಯಿಸುತ್ತಾ ಇರೋರು ಯಂಗ್ ಟೈಗರ್ ಜ್ಯೂನಿಯರ್ NTR..
ಕೋಟ್ಯಾಧಿಪತಿ ‘ಎವರು ಮೀಲೋ ಕೋಟೇಸ್ವರಲು’ ಕಾರ್ಯಕ್ರಮವನ್ನು NTR ನಡೆಸಿಕೊಡ್ತಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ನಡುವೆ ಈ ಕಾರ್ಯಕ್ರಮಕ್ಕೆ ಟಾಲಿವುಡ್ ಪ್ರಿನ್ಸ್ ಬರಲಿದ್ದಾರೆ ಅನ್ನೋ ಸುದ್ದಿ ಕೆಲವು ದಿನಗಳಿಮದ ಭಾರೀ ಸೌಂಡ್ ಮಾಡುತಿತ್ತು.. ಈಗ ಅದಕ್ಕೆ ಕಾಲ ಕೂಡಿ ಬಂದಿರುವ ಹಾಗೆ ಕಾಣ್ತಿದೆ.. ಧಿಕೃತವಾಗಿ ಈ ವಿಷಯ ಬಹಿರಂಗಗೊಂಡಿದೆ. ಮಹೇಶ್ ಕಾರ್ಯಕ್ರಮಕ್ಕೆ ಆಗಮಿಸಿರುವ ಈ ಎಪಿಸೋಡ್ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ಖಾಸಗಿ ವಾಹಿಸಿಯುವ ಸ್ಪಷ್ಟಪಡಿಸಿದೆ.