ಬೆಂಗಳೂರು : ಅಪ್ಪು ನಮ್ಮನ್ನೆಲ್ಲ ಅಗಲಿರುವ ಕಹಿ ಸತ್ಯವನ್ನ ಈವರೆಗೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗ್ತಿಲ್ಲ.. ಈ ನಡುವೆ ಅಪ್ಪು ಅಭಿಮಾನಿಗಳು ನೇತ್ರದಾನ , ರಕ್ತದಾನದಂತಹ ಅರ್ಥಪೂರ್ಣ ಕೆಸಗಳನ್ನ ಮಾಡುತ್ತಾ ಅಪ್ಪುಗೆ ಗೌರವ ನಮನ ಸಲ್ಲಿಸೋದ್ರ ಜೊತೆಗೆ ಅಪ್ಪು ವರ್ಚಸ್ಸನ್ನ ಮತ್ತುಷ್ಟ ಹೆಚ್ಚಿಸಸುವ ಕೆಲಸ ಮಾಡ್ತಿದ್ದಾರೆ.
ಇದೀಗ ಪುನೀತ್ ಜ್ಞಾಪಕಾರ್ಥವಾಗಿ ‘ತಿಂಡ್ಲು ಬಾಯ್ಸ್, ನಯೋನಿಕಾ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್ಸಿಲೋರ್ ವಿಷನ್ ಸಹಯೋಗದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಶಿಬಿರವನ್ನ ಆಯೋಜನೆ ಮಾಡಲಾಗ್ತಿದೆ.. 10 ವರ್ಷದ ಮೇಲ್ಪಟ್ಟವರು ಈ ಶಿಬಿರದಲ್ಲಿ ಭಾಗಿಯಾಗಬಹುದಾಗಿದೆ..
ತಿಂಡ್ಲು ಹಾಗೂ ನರಸೀಪುರ ಸರಕಾರಿ ಶಾಲೆಯಲ್ಲಿ ನವೆಂಬರ್ 24ಕ್ಕೆ ಶಿಬಿರ ಆಯೋಜನೆ ಮಾಡಲಾಗಿದೆ.. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರ ವರೆಗೂ ಸರ್ವರೂ ಮುಕ್ತವಾಗಿ ಶಿಬಿರಕ್ಕೆ ತೆರಳಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.. ಅಷ್ಟೇ ಅಲ್ಲ ಅವಶ್ಯಕತೆ ಇರುವವರಿಗೆ ಉಚಿತ ಕನ್ನಡಕಗಳನ್ನ ನೀಡಲಾಗುತ್ತದೆ..
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ
9535114466 /9900006464 /7338010077
ಅಂದ್ಹಾಗೆ ಇದೇ ‘ತಿಂಡ್ಲು ಬಾಯ್ಸ್’ ಕೋವಿಡ್ ಸಮಯದಲ್ಲಿ ಅಗತ್ಯವಿದ್ದವರಿಗೆ ನಾನಾ ರೀತಿಯಲ್ಲಿ ಸಹಾಯ ಮಾಡಿ ಜನರ ಮೆಚ್ಚುಗೆ ಪಡೆದಿದ್ದಾರೆ.. ಅಲ್ಲದೇ ರಕ್ತದಾನ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದೆ..